ನೆಹರೂನಗರದಲ್ಲಿ ಮನೆ ಮೇಲೆ ಬಿದ್ದ ತೆಂಗಿನ ಮರ : ಹಾನಿ

0

ಅಜ್ಜಾವರ ಗ್ರಾಮದ ನೆಹರೂನಗರದಲ್ಲಿ ಮನೆ ಪಕ್ಕದಲ್ಲಿದ್ದ ತೆಂಗಿನ ಮರವೊಂದು‌ ಬುಡ ಸಮೇತ ಮಗುಚಿ ಮನೆಯ ಮೇಲೆ ಬಿದ್ದ ಘಟನೆ ಅ.7ರಂದು ವರದಿಯಾಗಿದೆ.

ಸಂಜೆ ಸುರಿದ ಗಾಳಿ ಮಳೆಗೆ ತೆಂಗಿನ ಮರ ರಾಮ ಎಂಬವರ ಮನೆಯ ಮೇಲೆ‌ಬಿದ್ದಿದೆ. ಮನೆಯ ಹಂಚುಗಳು ಹಾನಿಯಾಗಿವೆ. ಮನೆಯೊಳಗೆ ಮೂವರು ಮಕ್ಕಳಿದ್ದು ಅವರಿಗೆ ಅದೃಷ್ಟವಶಾತ್ ಯಾವುದೇ‌ ಗಾಯಗಳಾಗಿಲ್ಲ ಎಂದು‌ ತಿಳಿದುಬಂದಿದೆ.