ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಸಂಘ(AIMDA) ಪ್ರಾಯೋಜಿತ AIMDA ಶ್ರೀ ಪುರಂದರದಾಸ ಮಹಾವಿದ್ಯಾಲಯ ಲೋಕಾರ್ಪಣಾ

0

ಯಕ್ಷಗಾನ ಕಲಾವಿದ ಉಮೇಶ್ ಶೆಟ್ಟಿಯವರಿಗೆ ಸನ್ಮಾನ

ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಸಂಘ(AIMDA) ಪ್ರಾಯೋಜಿತ AIMDA ಶ್ರೀ ಪುರಂದರದಾಸ ಮಹಾವಿದ್ಯಾಲಯ ಅ. 9ರಂದು ಬೆಂಗಳೂರಿನ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ AIMDA ಶ್ರೀ ಪುರಂದರದಾಸ ಮಹಾವಿದ್ಯಾಲಯ ಅಧ್ಯಕ್ಷ
ಸಾಯಿನಾರಾಯಣ ಕಲ್ಮಡ್ಕರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ, ಯಕ್ಷಗುರು ಉಮೇಶ್ ಶೆಟ್ಟಿ ಉಬರಡ್ಕರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಸಾಹಿತ್ಯ ಕಲೆಗಳಾದ ದಾಸಸಾಹಿತ್ಯ- ಅಧ್ಯಯನ -ಸಂಗೀತ ನೃತ್ಯ, ವಚನ ಸಾಹಿತ್ಯ -ಅಧ್ಯಯನ -ಸಂಗೀತ- ನೃತ್ಯ, ಜಾನಪದ ಸಾಹಿತ್ಯ -ಅಧ್ಯಯನ-ಸಂಗೀತ-ನೃತ್ಯ, ಸುಗಮ ಸಂಗೀತ ಅಧ್ಯಯನ- ಸಂಗೀತ, ಯಕ್ಷಗಾನ- ಅಧ್ಯಯನ-ನೃತ್ಯ, ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ
ಇವುಗಳಲ್ಲಿ ಅಧ್ಯಯನ ಕಲಿಯುವಿಕೆ ಹಾಗೂ ಪ್ರದರ್ಶನಗಳಿಗೆ ಸಂಬಂಧಿಸಿದಂತೆ ಪರೀಕ್ಷೆಗಳ ಮೂಲಕ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದಾದ ಕೆಲಸ
ಮಹಾವಿದ್ಯಾಲಯದ ಮ‌ೂಲಕ ನಡೆಯಲಿದೆ ಎಂದು ಮಹಾವಿದ್ಯಾಲಯದ ಅಧ್ಯಕ್ಷ ಸಾಯಿನಾರಾಯಣ ಕಲ್ಮಡ್ಕ ತಿಳಿಸಿದ್ದಾರೆ.