ಸಾಂತಪ್ಪ ಗೌಡ ಮಾದನಮನೆ ಯೇನೆಕಲ್ಲು ನಿಧನ

0

ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಶ್ರೀ ಬಚ್ಚನಾಯಕ ದೈವಸ್ಥಾನದಲ್ಲಿ ಪೂಜಾರಿ ವರ್ಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಾಂತಪ್ಪ ಗೌಡ ಮಾದನಮನೆ ಅ. 9ರಂದು ನಿಧನರಾದರು. ಇವರಿಗೆ 62 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಸುಗಂಧಿ, ಪುತ್ರಿಯರಾದ ಶ್ರೀಮತಿ ಆಶಿತಾರಘು ಶಿರಾ ತುಮಕೂರು, ಕು. ಅಂಕಿತಾ, ಕು. ಅಕ್ಷತಾ, ಕು. ರಕ್ಷಿತಾ, ಸಹೋದರ ಪರಮೇಶ್ವರ ಗೌಡ ಮಾದನಮನೆ ಸೇರಿದಂತೆ ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.