18 ಗ್ರಾಮಗಳಿಗೊಳಪಟ್ಟ ಸುಳ್ಯ ಸೀಮೆ ತೊಡಿಕಾನ ದೇವಸ್ಥಾನದಲ್ಲಿ ಭಕ್ತಾದಿಗಳ ಸಭೆ ಇಂದು ನಡೆಯಿತು.















ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನ ಸಮಿತಿ, ಉತ್ಸವ ಸಮಿತಿಗಳನ್ನು ರಚಿಸಿಕೊಂಡು ಹಲವು ಸಮಯಗಳಿಂದ ಶ್ರೀ ದೇವಳಕ್ಕೆ ಭಕ್ತಾಧಿಗಳು ಜಾತ್ರೋತ್ಸವ ಮತ್ತು ಇನ್ನಿತರ ಪರ್ವ ದಿನಗಳಲ್ಲಿ ದೇವಾಲಯಕ್ಕೆ ಬರುವಂತೆ ಭಕ್ತರ ಮನವೊಲಿಸಲಾಗಿದೆ. ಇನ್ನೂ ಹೆಚ್ಚಿನ ಜೀರ್ಣೋದ್ಧಾರ ಕಾರ್ಯಗಳು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಬಾಕಿ ಇದ್ದು ಭಕ್ತಾಧಿಗಳ ಒಗ್ಗೂಡುವಿಕೆಯಿಂದ ಈ ಕಾರ್ಯಗಳು ನಡೆಯುತ್ತವೆ. ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ತೀರ್ಮಾನವಾದಂತೆ ಪ್ರತೀ ಗ್ರಾಮದಲ್ಲಿ ಸಮಿತಿಯನ್ನು ರಚಿಸುವುದೆಂದು ದೇವಾಲಯಕ್ಕೆ ಮನೆವಂತಿಗೆ, ಹಸಿರುವಾಣಿ ಸಂಗ್ರಹಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಯು.ಎಂ., ಅರಂತೋಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಅಡ್ತಲೆ, ಭವಾನಿ ಶಂಕರ ಅಡ್ತಲೆ, ಭವಾನಿ ಶಂಕರ ಬನ ಬಿಳಿಯಾರು, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಉಮಾಶಂಕರ ಅಡ್ಯಡ್ಕ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುರೇಶ್ ಅಮೈ, ಹಾಡಿಕಲ್ಲು ಜಯರಾಮ್ ಮೊದಲಾದವರು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಹೇಳಿದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪಿ.ಬಿ.ದಿವಾಕರ ರೈ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಯು.ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಯು.ಕೆ. ಸ್ವಾಗತಿಸಿದರು.
ವೇದಿಕೆಯಲ್ಲಿ ಗುರುಮನೆಯ ನಾಗೇಶ್ ಬೈಪಡಿತ್ತಾಯ, ದೇವಾಲಯದ ಮ್ಯಾನೇಜರ್ ಆನಂದ ಕಲ್ಲಗದ್ದೆ ಉಪಸ್ಥಿತರಿದ್ದರು. ಕಿಶೋರ್ ಯು.ಎಂ. ಪ್ರಾರ್ಥಿಸಿ ವಂದಿಸಿದರು.







