ಧರ್ಮಕಾಣಿಕೆ ಕೂಪನ್ ಬಿಡುಗಡೆ
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳ ಸಭೆಯು ಅ.11 ರಂದು ನಡೆಯಿತು.














ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಹಿಂದೆ ನಡೆದ ಪ್ರಶ್ನಾಚಿಂತನೆಯ ಬಗ್ಗೆ ಮತ್ತು ದೇವಸ್ಥಾನದ ಮುಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದರು.
ಗ್ರಾಮಸ್ಥರು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿರುವುದಕ್ಕೆ ಪರಿಹಾರ ಕಾರ್ಯಗಳ ಬಗ್ಗೆ ಮಾತನಾಡಿದರು.

ಅ.16 ರಂದು ದೇವಸ್ಥಾನದಲ್ಲಿ ನವರಾತ್ರಿ ದಿನದಂದು ಚಂಡಿಕಾಹೋಮ ನಡೆಸುವ ಬಗ್ಗೆ ಅದರ ಖರ್ಚು ವೆಚ್ಚ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಚರ್ಚೆಗಳು ನಡೆದವು.
ಗ್ರಾಮದಲ್ಲಿ ಪ್ರತೀ ಮನೆಯಿಂದ ಪ್ರತೀ ತಿಂಗಳು ದೇವಸ್ಥಾನಕ್ಕೆ ಕಾಣಿಕೆ ನೀಡಲು ಧರ್ಮಕಾಣಿಕೆ ಕೂಪನ್ ಬಿಡುಗಡೆ ಮಾಡಲಾಯಿತು.
ಇತ್ತೀಚೆಗೆ ನಿಧನರಾದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕರುಣಾಕರ ಉದ್ದಂಪಾಡಿಯವರಿಗೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ,ವ್ಯವಸ್ಥಾಪನಾ ಸಮಿತಿ
ಸದಸ್ಯರಾದ ಶಿವರಾಮ ನೆಕ್ರೆಪ್ಪಾಡಿ,ಮುರಳೀಧರ ಕೊಚ್ಚಿ,ರಾಧಾಕೃಷ್ಣ ಚಾಕೋಟೆ,ಶ್ರೀಮತಿ ಆಶಾ ಮಡ್ತಿಲ,ಬಾಲಕೃಷ್ಣ ಬಿಎಸ್ಸೆನ್ನೆಲ್ ಮಡ್ತಿಲ,ಶ್ರೀಮತಿ ಶೀಲಾವತಿ ಕುಳ್ಳಂಪಾಡಿ ಉಪಸ್ಥಿತರಿದ್ದರು.
ಸಭೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು.







