ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಕನ್ನಡ ಯಾತ್ರಾ ರಥಕ್ಕೆ ಜಾಲ್ಸೂರಿನಲ್ಲಿ ಭವ್ಯ ಸ್ವಾಗತ

0

ಸರಕಾರಿ ಶಾಲೆಗಳನ್ನು ಉಳಿಸಲು ಮತ್ತು ಬೆಳೆಸಲು ಅಭಿಯಾನದ ರಾಜ್ಯ ಯಾತ್ರೆ ಶ್ಲಾಘನೀಯ : ವೈ ಎಸ್ ಹರಗಿ

ಕನ್ನಡ ಶಾಲೆಗಳನ್ನು ಉಳಿಸಲು ಮತ್ತು ಬೆಳೆಸಲು ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ವತಿಯಿಂದ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ‘ಕನ್ನಡ ಯಾತ್ರೆ’ ಕಾರ್ಯಕ್ರಮ ಶ್ಲಾಘನೀಯ ಎಂದು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ ಎಸ್ ಹರಗಿ ಯವರು ಹೇಳಿದರು.

ಅ 28ರಂದು ಚಾಲ್ಸೂರಿನಲ್ಲಿ ಅಭಿಯಾನದ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ‘ಕನ್ನಡ ಯಾತ್ರಾ’ ರಥದ ಸ್ವಾಗತ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.’ಸರಕಾರಿ ಶಾಲೆಗಳನ್ನು ಉಳಿಸಲು ಮತ್ತು ಬೆಳೆಸುವಲ್ಲಿ ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳ ಮತ್ತು ಇಲಾಖೆಯೊಂದಿಗೆ ಸ್ಥಳೀಯ ನಿವಾಸಿಗಳು ಕೈ ಜೋಡಿಸಿದ್ದಲ್ಲಿ ಯಾವುದೇ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.
ಈ ನಿಟ್ಟಿನಲ್ಲಿ ಅಭಿಯಾನವು ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಯಾತ್ರೆಯ ನೇತೃತ್ವವನ್ನು ವಹಿಸಿರುವ ಅಭಿಯಾನದ ಕರ್ನಾಟಕ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಮತ್ತು ತಂಡದವರನ್ನು ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಹೂಗುಚ್ಛ ನೀಡಿ ಸ್ವಾಗತಿಸಿ ಬರಮಾಡಿಕೊಂಡರು.

ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಅಭಿಯಾನದ ರಾಜ್ಯ ಸಮಿತಿಯ ಗೌರವ ಸಲಹೆಗಾರರು ಮತ್ತು ಮಹಾ ರಕ್ತದಾನಿಗಳಾದ ಪಿ ಬಿ ಸುಧಾಕರ್ ರೈ ರವರು ವಹಿಸಿ ಮಾತನಾಡಿ ‘ಅಭಿಯಾನವು ಸರಕಾರಿ ಶಾಲೆಗಳ ಕಾಳಜಿಯಿಂದ ಹಮ್ಮಿಕೊಂಡಿರುವ ಈ ಜಾಗೃತಿ ಯಾತ್ರೆಗೆ ನಾಡಿನ ಸರ್ವ ಜನತೆಯ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬದಿಯಡ್ಕ ತುಳು ಭವನದ ಮುಖ್ಯಸ್ಥರಾದ ಅಖಿಲೇಶ್ ನಗುಮುಗಂ, ಸುಳ್ಯ ಅಗ್ನಿಶಾಮಕ ಕಚೇರಿಯ ಉಪನಿರೀಕ್ಷಕರಾದ ಕಿರಣ್ ಕುಮಾರ್ ರವರು ಮಾತನಾಡಿ ಕನ್ನಡ ಯಾತ್ರೆಗೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಸರಗೋಡು ವಿಭಾಗದ ಮುಖ್ಯಸ್ಥರಾದ ತಾರನಾಥ ರೈ, ಕಲಾವಿದ ವಸಂತ ಬಾರಡ್ಕ ಕಾಸರಗೋಡು,ಜಾಲ್ಸೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಬಾಬು, ಅಶೋಕ್ ಅಡ್ಕಾರ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕ ಸಮಿತಿಯ ಅಧ್ಯಕ್ಷರಾದ ಯಸ್ವಿತ್ ಕಾಳಮ್ಮನೆ, ಹಿರಿಯ ಉದ್ಯಮಿ ಎಂ ಎಸ್ ಭಟ್, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಜಿಲ್ಲಾ ಗೌರವ ಸಲಹೆಗಾರರಾದ ಹಮೀದ್ ಸುಣ್ಣಮೂಲೆ, ನಝೀರ್ ಶಾಂತಿನಗರ, ತಾಲೂಕು ಸಮಿತಿಯ ಉಪಾಧ್ಯಕ್ಷರು ಗಳಾದ ಶಂಕರ್ ಪೆರಾಜೆ, ರಂಜಿತ್ ಪೂಜಾರಿ, ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಜಾತ ಕದಿಕಡ್ಕ ಮೊದಲಾದವರು ಉಪಸ್ಥಿತರಿದ್ದರು.

ಅಭಿಯಾನದ ಸುಳ್ಯ ತಾಲೂಕು ಅಧ್ಯಕ್ಷರಾದ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಸಂಘಟನಾ ಕಾರ್ಯದರ್ಶಿ ಅಶೋಕ್ ಪೀಚೆ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಸೇರಿದ ಮುಖಂಡರುಗಳು ಕನ್ನಡ ಯಾತ್ರಾ ರಥದೊಂದಿಗೆ ಕಿರು ಜಾಥಾ ನಡೆಸಿ ಅಭಿಯಾನದ ಕನ್ನಡ ಯಾತ್ರೆಗೆ ಚಾಲನೆ ನೀಡಿದರು.