ಪೆರುವಾಜೆ ಭಾವೈಕ್ಯ ಯುವಕ ಮಂಡಲದ ಸ್ವರ್ಣ ಸಂಭ್ರಮದ ಅಂಗವಾಗಿ ಪೆರುವಾಜೆಯಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ

0

ಭಾವೈಕ್ಯ ಯುವಕ ಮಂಡಲ ಪೆರುವಾಜೆ, ಭಾವೈಕ್ಯ ಮಹಿಳಾ ಮಂಡಲ ಪೆರುವಾಜೆ, ಭಾವೈಕ್ಯ ಚಿಗುರು ವೇದಿಕೆ ಪೆರುವಾಜೆ, ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವರ ಸಂಯುಕ್ತ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಜ್ಯೋತಿ ಮಂಗಳೂರು, ಪ್ರಸಾದ್ ನೇತ್ರಾಲಯ ಪುತ್ತೂರು, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು,ಕೆವಿಜಿ ಡೆಂಟಲ್ ಕಾಲೇಜು ಸುಳ್ಯ ಇವರ ಸಹಯೋಗದಲ್ಲಿ ಭಾವೈಕ್ಯ ಯುವಕ ಮಂಡಲ ಇದರ ಸ್ವರ್ಣ ಸಂಭ್ರಮದ ಅಂಗವಾಗಿ ಯುವಕ ಮಂಡಲದ ಪೂರ್ವಾಧ್ಯಕ್ಷರಾದ ದಿ. ಪ್ರೇಮನಾಥ್ ರೈ ಪೆರುವಾಜೆ ಇವರ ಸ್ಮರಣಾರ್ಥ ಅ.25ರಂದು ಪೆರುವಾಜೆ ಗ್ರಾಮ ಪಂಚಾಯತ್ ಆವರಣದಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕಣ್ಣಿನ ಪರೀಕ್ಷೆ,ದಂತ ಚಿಕಿತ್ಸಾ ಶಿಬಿರ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.


ಶಿಬಿರದ ಉದ್ಘಾಟನೆಯನ್ನು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತಾಡಿದರು.
ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ವಾಸುದೇವ ಪೆರುವಾಜೆ ವಹಿಸಿದ್ದರು. ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಇದರ ಅಧ್ಯಕ್ಷರಾದ ದಯಕರ ಆಳ್ವ ಹಾಗೂ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಅಧ್ಯಕ್ಷರಾದ ಮಹಮ್ಮದ್ ಆರೀಫ್ ಇವರು ಮಾತಾಡಿದರು. ಕೆಎಂಸಿ ಆಸ್ಪತ್ರೆ ಜ್ಯೋತಿ ಮಂಗಳೂರು ಇಲ್ಲಿನ ವೈದ್ಯರಾದ ಡಾ. ಸ್ವಸ್ತಿಕ್ ಕೆ ಸ್ ಇವರು ದೇಹದಾನದ ಬಗ್ಗೆ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ನ ವೈದ್ಯರಾದ ಡಾ ರಾಮಕೃಷ್ಣ ರಾವ್ ಇವರು ರಕ್ತದಾನದ ಬಗ್ಗೆ ವಿವರಿಸಿ ಮಾತಾಡಿದರು, ವೇದಿಕೆಯಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯರುಗಳಾದ ಡಾ ಕಿಶನ್ ಪ್ರೇಮಚಂದ್ರ ಶೆಣೈ ,ಡಾ ದುಷ್ಯಂತ್, ಡಾ ಅಭಿಬ್, ಕೆಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನಮೋಹನ್, ಕೆವಿಜಿ ಡೆಂಟಲ್ ಕಾಲೇಜು ಇದರ ವೈದ್ಯರು ಉಪಸ್ಥಿತರಿದ್ದರು.


ಯುವಕ ಮಂಡಲದ ರಜನೀಶ್ ಇವರು ಸ್ವಾಗತಿಸಿ ದೀಕ್ಷಿತ್ ಎಂ.ಡಿ. ವಂದಿಸಿದರು. ಶಿವಪ್ರಸಾದ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 100 ಕಿಂತಲೂ ಹೆಚ್ಚು ಜನರು ಈ ಒಂದು ಶಿಬಿರದ ಪ್ರಯೋಜನ ಪಡೆದುಕೊಂಡರು..