ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ, ರೋಟರಿ ಕ್ಲಬ್ ಸುಳ್ಯ, ಇಂಟರ್ಯಾಕ್ಟ್ ಕ್ಲಬ, ರೋಟರಿ ಶಾಲೆ ಸುಳ್ಯ, ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ವೆಬ್ಸೈಟ್, ಸುದ್ದಿ ಚಾನೆಲ್ ಮತ್ತು ಸ್ವರ್ಣಂ ಜ್ಯುವೆಲ್ಸ, ರಿಷಿ ಫ್ಯಾನ್ಸಿ – ಟಾಯ್ಸ ಇದರ ಸಹಯೋಗದೊಂದಿಗೆ ಪ್ರತೀ ವರ್ಷ ಮಕ್ಕಳ ದಿನಾಚರಣೆಯ ಅಂಗವಾಗಿ ಅವಿಭಜಿತ ಸುಳ್ಯ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಱವರ್ಣ ಚಿತ್ತಾರೞ ವನ್ನು ನಡೆಸಿಕೊಂಡು ಬಂದಿದ್ದು, ಈ ಬಾರಿ ನ.೧೫ಕ್ಕೆ ನಡೆಯಲಿದೆ.














ಈ ಬಾರಿ ಕಾರ್ಯಕ್ರಮವನ್ನು ವಿಭಿನ್ನವಾಗಿ ಸಂಯೋಜಿಸಲಾಗಿದ್ದು ಮಹಾಲಸ ಸ್ಕೂಲ್ ಆಫ್ ಆರ್ಟ್ಸ್ ಮಂಗಳೂರು, ಚಿತ್ರಕಲಾ ಪರಿಷತ್ ಬೆಂಗಳೂರು, ಕಾವಾ ಮೈಸೂರು ಸೇರಿದಂತೆ ನಾಡಿನ ಹೆಸರಾಂತ ಕಲಾವಿದರು ಸ್ಥಳದ ಚಿತ್ರ ಬರೆಯಲಿದ್ದಾರೆ ಹಾಗೂ ಚಿತ್ರಕಲಾ ಪ್ರದರ್ಶನವೂ ಇರುತ್ತದೆ ಎಂದು ಸಂಘಟಕರಾದ ಶ್ರೀಹರಿ ಪೈಂದೋಡಿ ಮತ್ತು ಪ್ರಸನ್ನ ಐವರ್ನಾಡು ತಿಳಿಸಿದ್ದಾರೆ.







