ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಪತ್ತೆಯಾದ ಮೃತದೇಹ

0

ಸರ್ಪಸಂಸ್ಕಾರಕ್ಕೆಂದು ಬಂದಿದ್ದ ತುರುವೇಕೆರೆಯ ಯಾತ್ರಾರ್ಥಿ ದೇವೆಗೌಡ ಸಾವು

ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಮೃತದೇಹವೊಂದು ಇಂದು ಬೆಳಿಗ್ಗೆ ಪತ್ತೆಯಾಗಿದ್ದು, ಪರಿಶೀಲಿಸಿದಾಗ ಅದು ತುರುವೇಕೆರೆಯ ದೇವೆ ಗೌಡ ಎಂಬವರದ್ದು (೮೦ ವರ್ಷ) ಎಂದು ತಿಳಿದು ಬಂದಿದೆ.

ಸುಬ್ರಹ್ಮಣ್ಯ ಕುಲ್ಕುಂದ ಕಾಲನಿ ರಸ್ತೆಯಾಗಿ ಕುಮಾರಧಾರ ನದಿಗೆ ಸೇರುವ ಹತ್ತಿರವೇ ನದಿಯಲ್ಲಿ ಇಂದು ಬೆಳಿಗ್ಗೆ ಗಂಡಸಿನ ಮೃತದೇಹ ಬೆಳಗ್ಗೆ ಪತ್ತೆಯಾಗಿತ್ತು. ಬಳಿಕ ಪರಿಶೀಲನೆ ವೇಳೆ ತುರುವೇಕೆರೆಯಿಂದ ಸುಬ್ರಹ್ಮಣ್ಯ ದೇವಾಲಯಕ್ಕೆ ಸರ್ಪ ಸಂಸ್ಕಾರಕ್ಕೆಂದು ಬಂದಿರುವ ಯಾತ್ರಾರ್ಥಿಗಳೊಂದಿಗೆ ದೇವೆ ಗೌಡ ಎಂಬವರು ಬಂದಿದ್ದರು. ಅಸೌಖ್ಯತೆ ಉಂಟೆಂದು ವಸತಿಗೃಹದಲ್ಲೇ ಉಳಿದುಕೊಂಡಿದ್ದ ಅವರು ನದಿಯಲ್ಲಿ ಶವವಾಗಿ ಕಂಡು ಬಂದಿದ್ದಾರೆ.
ಇದೇ ವ್ಯಕ್ತಿ ಕಾಣೆಯಾಗಿರುವುದಾಗಿ ಅವರ ಮನೆಯವರು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಬಂದಾಗ ಕುಮಾರಧಾರ ನದಿಯಲ್ಲಿ ಪತ್ತೆಯಾದ ಶವ ದೇವೆ ಗೌಡರದ್ದೇ ಎಂದು ಗೊತ್ತಾಗಿದೆ.
ಯಾವ ಕಾರಣಕ್ಕಾಗಿ ಈ ಘಟನೆ ಸಂಭವಿಸಿದೆ ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.