ದೆಹಲಿಯಿಂದ ವಿಡಿಯೋ ಕಾಲ್ ಮೂಲಕ ಶುಭಾಶಯ ಸ್ವೀಕರಿಸಿದ ಸಚಿವರು
ಜನರ ಪ್ರೀತಿ, ಶುಭ ಹಾರೈಕೆಯಿಂದ ಜನ ಸೇವೆಗೆ ಅವಕಾಶ ದೊರೆತಿದೆ ಎನ್ನುವ ಖಾದರ್ರವರ ಆಶಯಕ್ಕೆ ಈ ಕಾರ್ಯಕ್ರಮ ಪೂರಕ : ಕೆ.ಎಂ.ಮುಸ್ತಫ















ಕರ್ನಾಟಕ ಸರ್ಕಾರದ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಡಾ. ಯು. ಟಿ. ಖಾದರ್ ಫರೀದ್ ರವರ ಹುಟ್ಟುಹಬ್ಬದ ಅಂಗವಾಗಿ ಸುಳ್ಯ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಭಿನ್ನ ಸಾಮರ್ಥ್ಯ ದ ವಿದ್ಯಾರ್ಥಿಗಳೊಂದಿಗೆ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಲಾಯಿತು.
ಅಧ್ಯಕ್ಷತೆಯನ್ನು ಎಂ. ಬಿ. ಫೌಂಡೇಶನ್ ಅಧ್ಯಕ್ಷ ಎಂ. ಬಿ. ಸದಾಶಿವ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ.ಮುಸ್ತಫ ಭಾಗವಹಿಸಿ , ಸದಾ ಜನ ಸೇವೆ ಮಾಡಿ, ಆಶಕ್ತರಿಗೆ, ಸಂತ್ರಸ್ತರ ನೆರವಾಗುವುದರಲ್ಲಿ ತೃಪ್ತಿ ಕಾಣುವ ಸಚಿವ ಯು. ಟಿ. ಖಾದರ್ ರವರ ಭಾವನೆ ಗಳಿಗೆ ಪೂರಕ ವಾದ ಈ ಕಾರ್ಯಕ್ರಮ ಸಂಘಟಿಸಿದ ಎಂ.ಬಿ.ಯವರಿಗೆ ಅಭಿನಂದನೆಗಳು ಎಂದರು.

ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳ ಶಾಲೆಯ ಸಂಚಾಲಕಿ ಶ್ರೀಮತಿ ಹರಿಣಿ ಸದಾಶಿವ ಶುಭ ಹಾರೈಸಿದರು.
ಶಾಲಾ ವಿದ್ಯಾರ್ಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ದೆಹಲಿಯಲ್ಲಿದ್ದ ಸಚಿವರನ್ನು ಶುಭ ಹಾರೈಸಲು ಸಂಪರ್ಕಿಸಿದಾಗ ತನ್ನ ಮೊಬೈಲ್ ನಲ್ಲಿ ವಿಡಿಯೋ ಕಾಲ್ ಮಾಡಿ ಶುಭಾಶಯ ಸ್ವೀಕರಿಸಿ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷೆ ಕಮರ್ ಬಾನು ಉಪಸ್ಥಿತರಿದ್ದರು.
ಶಾಲೆ ಮುಖ್ಯ ಶಿಕ್ಷಕಿ ಹರಿಣಿ ಸದಾಶಿವ ವಂದಿಸಿದರು. ವಿದ್ಯಾರ್ಥಿಗಳಿಗೆ ಹುಟ್ಟು ಹಬ್ಬದ ಪ್ರಯುಕ್ತ ಸೂಡಾ ಅಧ್ಯಕ್ಷರ ವತಿಯಿಂದ ಕಿಟ್ ವಿತರಿಸಲಾಯಿತು.








