













ಆಲೆಟ್ಟಿ ಗ್ರಾಮದ ಮೊರಂಗಲ್ಲು ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ 2027 ರ ಮಾರ್ಚ್ ತಿಂಗಳಲ್ಲಿ ನಡೆಯುವ ಪುನರ್ ಪ್ರತಿಷ್ಠಾ ಕಲಶೋತ್ಸವದ ಹಿನ್ನಲೆಯಲ್ಲಿ ಪ್ರಶ್ನಾ ಚಿಂತನೆಯು ಅ.12 ರಂದು ನಡೆಯಿತು.

ದೈವಜ್ಞರಾದ ಎಸ್. ಎನ್.ಭಟ್ ಪಂಜ ರವರ ನೇತೃತ್ವದಲ್ಲಿ ಪ್ರಶ್ನಾ ಚಿಂತನೆ ಇರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬೆಳ್ತ ಮೊರಂಗಲ್ಲು, ಆಡಳಿತ ಸಮಿತಿ,ಸೇವಾ ಸಮಿತಿ, ಮಹಿಳಾ ಸಮಿತಿಯ ಪದಾಧಿಕಾರಿಗಳು ಹಾಗೂ ಮೊರಂಗಲ್ಲು ಕಾಲನಿಯ ಸಮಸ್ತರು ಉಪಸ್ಥಿತರಿದ್ದರು.







