ಅ.15 ರಂದು ಗುತ್ತಿಗಾರು ಮುತ್ಲಾಜೆ ಚಣಿಲದಲ್ಲಿ ಶ್ರೀ ಶೂಲಿನಿ ದುರ್ಗಾದೇವಿ ಮತ್ತು ಶಾಸ್ತಾವು ಕ್ಷೇತ್ರದಲ್ಲಿ ದುರ್ಗಾ ಪೂಜೆ, ಹಗ್ಗಜಗ್ಗಾಟ

0

ಶ್ರೀ ಶೂಲಿನಿ ದುರ್ಗಾದೇವಿ ಮತ್ತು ಶಾಸ್ತಾವು ಕ್ಷೇತ್ರ ಮುತ್ಲಾಜೆ – ಚಣಿಲ ಗುತ್ತಿಗಾರು ಇಲ್ಲಿ ದಸರಾ ಪ್ರಯುಕ್ತ ಅ.15 ರಂದು ದುರ್ಗಾಪೂಜೆ, ಹಗಜಗ್ಗಾಟ ನಡೆಯಲಿದೆ.

ಪೂರ್ವಾಹ್ನ ಗಣಪತಿ ಹವನ ನಡೆಯಲಿದೆ. ಸಂಜೆ ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಮತ್ತು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಭಜನಾ ಸೇವಾ ಸಮಿತಿ ವಳಲಂಬೆ ವತಿಯಿಂದ ಭಜನಾ ಕಾರ್ಯಕ್ರಮ ನಡೆದು ರಾತ್ರಿ ದುರ್ಗಾ ಪೂಜೆ ನಡೆದು ಮಹಾ ಮಂಗಳಾರತಿ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಅ. 16 ರ ಬೆಳಿಗ್ಗೆ ಆಯುಧ ಪೂಜೆ ನಡೆಯಲಿದೆ.

ಹಗ್ಗಜಗ್ಗಾಟ ಪಂದ್ಯಾಟ

ಅ.15 ಸಾರ್ವಜನಿಕ ಪರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ ನಡೆಯಲಿದೆ
ಪುರುಷರ ವಿಭಾಗ ಕ್ಕೆ ಪ್ರಥಮ ದ್ವಿತೀಯ ತೃತೀಯ ಹಾಗೂ ಚತುರ್ಥ ನಗದು ಬಹುಮಾನ ಹಾಗೂ ಪ್ರಶಸ್ತಿ, ಫಲಕ ಇರಲಿದೆ.
ಮಹಿಳೆಯರ ವಿಭಾಗದ ಹಗ್ಗಜಗ್ಗಾಟಕ್ಕೆ ಪ್ರಥಮ, ದ್ವಿತೀಯ ಬಹುಮಾನ ನಗದು ಹಾಗೂ ಪ್ರಶಸ್ತಿ ಫಲಕ ಇರಲಿದೆ. ಹಗ್ಗ ಜಗ್ಗಾಟಕ್ಕೆ
8 ಜನರ ತಂಡವಾಗಿರ ಬೇಕಾಗಿದ್ದು ಪ್ರವೇಶ ಶುಲ್ಕ ಇರುವುದು.