ಪಂಜ: ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನಾಲ್ಕನೇ ದಿನದ ನವರಾತ್ರಿ ಪೂಜೆ

0

⏫ನಾಳೆ (ಅ. 15) ಕು.ಆರಾಧನಾ ಬಾಬ್ಲುಬೆಟ್ಟು ಹಾಗೂ ಕು. ಪ್ರಣತಿ ಜೋಗಿಬೆಟ್ಟು ಇವರಿಂದ ಭರತ ನಾಟ್ಯ


⏫ ಪಂಜ ವಲಯ ಹವ್ಯಕ ಮಹಿಳೆಯರಿಂದ ಭಜನಾ ಸಂಕೀರ್ತನೆ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಅ.11ರಂದು ಆರಂಭ ಗೊಂಡಿದ್ದು ಅ. 20
ತನಕ ನಡೆಯಲಿದೆ.

ಅ.14 ರಂದು ಬೀದಿಗುಡ್ಡೆ ಸಂಪ್ಯಾಡಿ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿಯಿಂದ
ಭಜನಾ ಸಂಕೀರ್ತನೆ.ಕು. ಸ್ತುತಿ ರೈ ಐಗಿರಿ ಅಡ್ಡಬೈಲು ( ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ ರೈ ಮತ್ತು ವಿದುಷಿ ಸ್ವಸ್ತಿಕ ಆರ್ ಶೆಟ್ಟಿ ಇವರ ಶಿಷ್ಯೆ ), ಮತ್ತು ಕು.ಚರೀಷ್ಮ ರೈ ಪಲ್ಲೋಡಿ (ವಿದುಷಿ ಪ್ರಾಂಜಲಿ ಕಾನತ್ತೂರು ಇವರ ಶಿಷ್ಯೆ )ಇವರಿಂದ ‘ಭರತ ನಾಟ್ಯ” ಕಲಾ ಸೇವೆ ನಡೆಯಿತು.


ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರು,ಭಕ್ತಾದಿಗಳು ಪಾಲ್ಗೊಂಡಿದ್ದರು.

ಅ.15 ರಂದು ಪಂಜ ವಲಯ ಹವ್ಯಕ ಮಹಿಳೆಯರಿಂದ ಭಜನಾ ಸಂಕೀರ್ತನೆ,ವಿಶ್ವ ಕಲಾನಿಕೇತನ ಇನ್ಸಿಟ್ಯೂಟ್ ಆಫ್ ಆರ್ಟ್ ಅಂಡ್ ಕಲ್ಚರ್ (ರಿ) ಪುತ್ತೂರು ಇಲ್ಲಿಯ ವಿದ್ಯಾರ್ಥಿಗಳಾದ ಕು.ಆರಾಧನಾ ಬಾಬ್ಲುಬೆಟ್ಟು ಹಾಗೂ ಕು. ಪ್ರಣತಿ ಜೋಗಿಬೆಟ್ಟು (ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ ರೈ ಹಾಗೂ ವಿದುಷಿ, ಸ್ವಸ್ತಿಕ ಆರ್ ಶೆಟ್ಟ ಇವರ ಶಿಷ್ಠೆಯರು).
ಇವರಿಂದ “ಭರತನಾಟ್ಯ’ಕಲಾ ಸೇವೆ
ನಡೆಯಲಿದೆ.