. ಅಚ್ಚುಕಟ್ಟಿನ ವ್ಯವಸ್ಥೆ, – 21 ಬಗೆಯ ಖಾದ್ಯ














ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಅ.14 ರಂದು ನ ಹೊಸ್ತಾರೋಗಣೆ (ನವಾನ್ನ) ಕಾರ್ಯಕ್ರಮದಲ್ಲಿ ಸುಮಾರು ಎರಡುವರೆ ಸಾವಿರಕ್ಕೂ ಮಿಕ್ಕಿ ಭಕ್ತರು ಹೊಸ ಅಕ್ಕಿ ಭೋಜನವನ್ನು ಉಂಡರು. 21 ಬಗೆಯ ವಿವಿಧ ಖಾದ್ಯಗಳನ್ನು ಒಳಗೊಂಡ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಭೋಜನಕ್ಕಾಗಿ ಈ ದೇವಳದ ಮುಂಭಾಗದಲ್ಲಿ ಹಿಂದಿನ ಸಂಪ್ರದಾಯದಂತೆ ಸಗಣಿ ಸಾರಿಸಿದ ನೆಲದಲ್ಲಿ ಭಕ್ತರು ಕುಳಿತು ಊಟ ಮಾಡಿದರು. ಸಭಾಂಗಣದಲ್ಲಿ ಕೂತು ಟೇಬಲ್ ವ್ಯವಸ್ಥೆಯೊಂದಿಗೆ ಭೋಜನ ಸವಿದರು. ಶ್ರೀ ದೇವಳದಲ್ಲಿ ಬೆಳಿಗ್ಗೆ ಸ್ಥಳೀಯ, ಊರಿನ ಭಕ್ತರು ಬಂದು ತೆನೆಯನ್ನು ಸ್ವೀಕರಿಸಿ ಮನೆಗಳಿಗೆ ಕೊಂಡೊಯ್ದರು. ಮಧ್ಯಾಹ್ನ ಮಹಾಪೂಜೆ ಬಳಿಕ ತೀರ್ಥಪ್ರಸಾದ ಸ್ವೀಕರಿಸಿ ಭೋಜನ ಸ್ವೀಕರಿಸಿದರು. ಈ ಎಲ್ಲಾ ವ್ಯವಸ್ಥೆಗಳನ್ನು ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ,ಟ್ರಸ್ಟ್,ಭಜನಾ ಸಮಿತಿ,ವರಮಹಾಲಕ್ಷ್ಮಿ ಸಮಿತಿ, ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ರಾತ್ರಿಯಿಂದಲೇ ಸಾಕಷ್ಟು ದುಡಿದು ಸ್ವಯಂಸೇವಕರಾಗಿ ಸಲ್ಲಿಸಿದ ಸೇವೆಗೆ ಮೆಚ್ಚುಗೆ ವ್ಯಕ್ತವಾಯಿತು.









