













ಸುಳ್ಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಇದರ 2026 -27 ನೇ ಸಾಲಿನ ನೂತನ ಉತ್ಸವ ಸಮಿತಿಯನ್ನು ಅ.11 ರಂದು ಅಯ್ಯಪ್ಪ ಸೇವಾ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಜನಾರ್ದನ ದೋಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಗುರುಸ್ವಾಮಿಯವರಾದ ರಾಮಕೃಷ್ಣ ಎ,ಸಂತೋಷ್ ಜಟ್ಟಿಪಳ್ಳ ರವರು ಉಪಸ್ಥಿತರಿದ್ದರು.
ನೂತನಅಧ್ಯಕ್ಷರಾಗಿ ಧನಂಜಯ ಪಲ್ಲತಡ್ಕ, ಉಪಾಧ್ಯಕ್ಷರಾಗಿ ದಿನೇಶ್ ಅಡ್ಕಾರ್,ಕಾರ್ಯದರ್ಶಿಯಾಗಿ ಸೀತಾರಾಮ ಮೊರಂಗಲ್ಲು, ಜತೆ ಕಾರ್ಯದರ್ಶಿಯಾಗಿ ಸತೀಶ್ ಐ ಬಿ, ಖಜಾಂಜಿಯಾಗಿ ಜಗದೀಶ್ ಕುಕ್ಕನ್ನೂರ್,
ಸದಸ್ಯರುಗಳಾಗಿಸುಧಾಕರ ಕುರುಂಜಿಭಾಗ್ ,ದೀಕ್ಷಿತ್ ಜಯನಗರ,ಶಿವಣ್ಣ ಮಂಡೆಕೋಲು,ಚಂದ್ರಶೇಖರಅಡ್ಪಂಗಾಯ,ರಾಜೇಶ್ ಅಮೈ,ದಿನೇಶ್ ಕಣಕ್ಕೂರು,ಸತೀಶ್ ಕಾನತ್ತಿಲ ರವರನ್ನು ಆಯ್ಕೆ ಮಾಡಲಾಯಿತು.
ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.







