ಉಬರಡ್ಕ‌ಮಿತ್ತೂರು ಗ್ರಾಮ ಗೌಡ ಮಹಿಳಾ ಸಮಿತಿ ರಚನೆ

0

ಗೌಡರ ಯುವ ಸೇವಾ ಸಂಘ ಸುಳ್ಯ ಇದರ ಅಧೀನದಲ್ಲಿ ಉಬರಡ್ಕ‌ಮಿತ್ತೂರು ಗ್ರಾಮ ಗೌಡ ಮಹಿಳಾ ಸಮಿತಿಯನ್ನು ಅ.6ರಂದು ಶಾಸ್ತಾವು ಅಯ್ಯಪ್ಪ ಭಜನಾ ಮಂದಿರ ಕುತ್ತಮೊಟ್ಟೆ ಇಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.

ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀಮತಿ ಲತಾ ನಾರ್ಕೋಡು, ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ರಮೇಶ್ ಪಾನತ್ತಿಲ, ಕಾರ್ಯದರ್ಶಿಯಾಗಿ ಶ್ರೀಮತಿ ವನಿತಾ ವಿನೋದ್ ಮೀನಗದ್ದೆ, ಕೋಶಾಧಿಕಾರಿ ಯಾಗಿ ಶ್ರೀಮತಿ ಶೈಲ ದಿವಾಕರ ಶೆಟ್ಟಿಹಿತ್ಲು, ಉಪಾಧ್ಯಕ್ಷರಾಗಿ ಶ್ರೀಮತಿ ಜಯಲಕ್ಷ್ಮಿಮೋಂಟಡ್ಕ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಚಿತ್ರ ಕಾಡುತೋಟ ಇವರನ್ನು ಆಯ್ಕೆ ಮಾಡಲಾಯಿತು.

ಉಬರಡ್ಕ‌ಮಿತ್ತೂರು ಗ್ರಾಮ ಗೌಡ ಸಮಿತಿಯ ಅಧ್ಯಕ್ಷರಾದ ಜಯಕರ ಮಡ್ತಿಲ ಪ್ರಾಸ್ತಾವಿಕ ಮಾತನಾಡಿದರು. ಗೌಡರ ಯುವ ಸೇವಾ ಸಂಘದ ನಿರ್ದೇಶಕರು ಹಾಗೂ ಉಬರಡ್ಕ ಗ್ರಾಮ ಗೌಡ ಸಮಿತಿಯ ಉಸ್ತುವಾರಿ ನಿರ್ದೇಶಕರಾದ ಬೆಳ್ಯಪ್ಪ ಗೌಡ ಬಳ್ಳಡ್ಕ ಗ್ರಾಮ ಸಮಿತಿಗಳ‌ ಅವಶ್ಯಕತೆಗಳ ಕುರಿತು ಮಾತನಾಡಿದರು.

ಗೌಡರ ಯುವ ಸೇವಾ ಸಮಿತಿ ಅಧ್ಯಕ್ಣರಾದ ಪಿ.ಎಸ್.ಗಂಗಾಧರ್ ಅಧ್ಯಕ್ಣತೆ ವಹಿಸಿದ್ದರು.
ಗ್ರಾಮ ಸಮಿತಿಯ ಕಾರ್ಯದರ್ಶಿ ಬಿ.ವಿ.ತೀರ್ಥವರ್ಣ ಬಳ್ಳಡ್ಕ, ಕೋಶಾಧಿಕಾರಿ ಲಕ್ಷ್ಮಣ ಗೌಡ ಬಳ್ಳಡ್ಕ ಉಪಸ್ಥಿತರಿದ್ದರು. ತರುಣ ಘಟಕದ ದಿನೇಶ್ ಬೈತಡ್ಕ ಸ್ವಾಗತಿಸಿದರು. ತೀರ್ಥವರ್ಣ ಬಳ್ಳಡ್ಕ ವಂದಿಸಿದರು.