













ಕುಕ್ಕುಜಡ್ಕಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕ್ರೀಡಾ ಸಾಧಕಿ ಚಿನ್ನದ ಪದಕ ವಿಜೇತ ಅಥ್ಲೇಟಿಕ್ ಕು. ಭಾನವಿ ಪಿ.ಎಸ್ ರವರನ್ನು ಅ.14 ರಂದು ಸನ್ಮಾನಿಸಿಅಭಿನಂದಿಸಲಾಯಿತು.

ಸಂಘದ ಅಧ್ಯಕ್ಷರಾದ ಕೇಶವ ಕರ್ಮಾಜೆಯವರು ಗ್ರಾಮೀಣ ಕ್ರೀಡಾ ಪ್ರತಿಭೆ ರಾಜ್ಯ ಮಟ್ಟದಲ್ಲಿ ಇತಿಹಾಸ ನಿರ್ಮಿಸಿದ ವಿದ್ಯಾರ್ಥಿನಿ ಅಧ್ಭುತ ಸಾಧನೆ ಮಾಡುವ ಮೂಲಕ ಹುಟ್ಟೂರಿಗೆ ಮತ್ತು ಕಲಿತ ಶಾಲೆಗೆ ಕೀರ್ತಿ ತಂದು ಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಅರುಣ್ ನಾಯರ್ ಕಲ್ಲು, ನಿರಂಜನ ಕಾನಡ್ಕ, ಕುಮಾರ ಬೆಳ್ಚಪ್ಪಾಡ, ಅರುಣ್ ಕುಮಾರ್ ಪರ್ಮಲೆ, ರಘುರಾಮ ಕೆ,
ಶ್ರೀಮತಿ ವೀಣಾ ಎಂ.ಡಿ ಯವರು ಅಭಿನಂದಿಸಿ ಶುಭ ಹಾರೈಸಿದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ಕುಮಾರ್ ಪಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.







