ಜಾನುವಾರು ಸಹಿತ ವಾಹನ ವಶ : ಮೂವರಿಗೆ ನ್ಯಾಯಾಂಗ ಬಂಧನ














ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದು, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಂಡಿರುವ ಘಟನೆ ಅ. 14 ರಂದು ನಡೆದಿದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪಿಎಸ್ಐ ಆಂಜನೇಯ ರೆಡ್ಡಿ ಅವರು ಸರ್ಕಲ್ ನೈಟ್ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಕುಲ್ಕುಂದ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಬಂದ KA-13-C-3446 ನಂಬರಿನ ಬೊಲೆರೋ ಪಿಕಪ್ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಕಪ್ಪು ಬಣ್ಣದ ಹಸು ಮತ್ತು ಕಪ್ಪು ಬೂದು ಮಿಶ್ರಿತ ಬಣ್ಣದ ಹೋರಿ ಸೇರಿ ಎರಡು ಜಾನುವಾರುಗಳಿದ್ದವು. ಸಾಗಾಟಕ್ಕೆ ಯಾವುದೇ ಪರವಾನಿಗೆ ಇರಲಿಲ್ಲ ಎನ್ನಲಾಗಿದೆ.
ಮಡಪ್ಪಾಡಿಯ ಹಾಡಿಕಲ್ಲು ಮತ್ತು ದೊಡ್ಡತೋಟ ದಿಂದ ತಂದ ಗೋವುಗಳಾಗಿದ್ದು
ಪರವಾನಿಗೆ ರಹಿತವಾಗಿ ಸಾಗಿಸುತಿದ್ದು ವಾಹನದಲ್ಲಿದ್ದ ಆನಂದ ಎಲ್.ಎಸ್ , ಸಚಿನ್ ಮತ್ತು ಕೀರ್ತೇಶ್ ಅವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿರುವುದಾಗಿ ತಿಳಿದು ಬಂದಿದೆ. ಒಂದು ಹಸು ಒಂದು ಹೋರಿ – ಬೊಲೆರೋ ಪಿಕಪ್ ವಾಹನ ಪೊಲೀಸ್ ವಶದಲ್ಲಿರುವುದಾಗಿ ತಿಳಿದು ಬಂದಿದ್ದು
ಕಾರ್ಯಾಚರಣೆಯಲ್ಲಿ
ಎ.ಎಸ್.ಐ ಸೀತಾರಾಯ ಗೌಡ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಪೊಲೀಸ್ ಕಲಂ 4,5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ 2020, ಕಲಂ 11(ಡಿ) ಪ್ರಾಣಿ ಹಿಂಸಾ ತಡೆ ಕಾಯ್ದೆ 1960 ಮತ್ತು ಕಲಂ 66, 192(A), 66 IMV ಆಕ್ಟ್ 1988 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿರುವುದಾಗಿ ತಿಳಿದು ಬಂದಿದೆ.







