ಐವರ್ನಾಡಿನ ಪ್ರವೀಣ್ ಕುಮಾರ್ ಪವಿತ್ರಮಜಲು ರವರಿಗೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ

0

“ವೆಟರನ್‌ ಸ್ಪೋರ್ಟ್ಸ್‌ ಮತ್ತು ಗೇಮ್ಸ್‌ ನ್ಯಾಷನಲ್‌ ಫೌಂಡೇಶನ್‌” ರವರು ನಡೆಸಿದ 5ನೇ ವೆಟರನ್ಸ್‌ ಸ್ಪೋರ್ಟ್ಸ್‌ ಮತ್ತು ಗೇಮ್ಸ್‌ ರಾಷ್ಟ್ರೀಯ ಚಾಂಪಿಯನ್‌ ಶಿಪ್‌ – 2026 ಅ.7 ರಿಂದ ಅ.11 ರವರೆಗೆ ತಮಿಳುನಾಡಿನ ಕೊಯಂಬತ್ತೂರಿನ ನೆಹರೂ ಸ್ಟೇಡಿಯಂನಲ್ಲಿ ನಡೆದಿದ್ದು, ಕ್ರೀಡಾಕೂಟದಲ್ಲಿ ಐವರ್ನಾಡಿನ ಪ್ರವೀಣ್ ಕುಮಾರ್ ಪವಿತ್ರಮಜಲು ರವರು ಭಾಗವಹಿಸಿ ಹ್ಯಾಮರ್‌ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ, ಚಕ್ರ ಎಸೆತದಲ್ಲಿ 4ನೇ ಸ್ಥಾನ, ಗುಂಡು ಎಸೆತದಲ್ಲಿ 5ನೇ ಸ್ಥಾನ ಹಾಗೂ ಈಟಿ ಎಸೆತದಲ್ಲಿ 6ನೇ ಸ್ಥಾನ ಪಡೆದು ಗಮನಾ‍ರ್ಹ ಸಾಧನೆ ಮಾಡಿದ್ದು ದುಬೈಯಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ನಿವೃತ್ತ ಮುಖ್ಯ ಅಧ್ಯಾಪಕರಾದ ದಿ. ದೇವಪ್ಪ ಗೌಡ ಪವಿತ್ರಮಜಲು ಇವರ ಪುತ್ರ.