













ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ & ಮೆಶಿನ್ ಲರ್ನಿಂಗ್ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಅಕ್ಷಯ ಪ್ರಶಾಂತ್ ರೈ ಪಲ್ಲೋಡಿಯವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
ಇವರು `ಡಿಸೈನ್ ಎಂಡ್ ವ್ಯಾಲಿಡೇಶನ್ ಆಫ್ ಗ್ಯಾಲ್ವೇನಿಕ್ ಸ್ಕಿನ್ ರೆಸ್ಪೊನ್ಸ್ ಡಿವೈಸ್ ಫಾರ್ ಟ್ರೀಟ್ಮೆಂಟ್ ಆಫ್ ನ್ಯೂರೋಲಾಜಿಕಲ್ ಎಂಡ್ ಸೈಕಿಯಾಟ್ರಿಕ್ ಡಿಸಾರ್ಡರ್ಸ್ (Design and Validation of galvanic skin response (GSR) device for treatment of neurological and psychiatric disorders)’ ಎಂಬ ವಿಷಯದ ಬಗ್ಗೆ ಎಸ್.ಇ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರೊಫೆಸರ್ ಹಾಗೂ ಡೀನ್ (ಆರ್ಡಿ) ಆಗಿರುವ ಡಾ.ಉಷಾ ದೇಸಾಯಿ ಮತ್ತು ಸೆಂಟ್ರಲ್ ಯುನಿವರ್ಸಿಟಿ ಹರಿಯಾಣದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್ ಡಾ.ಆಕಾಶ್ ಸಕ್ಸೇನ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಪ್ರೌಢ ಪ್ರಬಂಧಕ್ಕೆ ಈ ಪಿಎಚ್ಡಿ ಪದವಿ ಬಂದಿದೆ.
ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್ ವಿಭಾಗದಲ್ಲಿ 9 ವರ್ಷಗಳಿಂದ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿರುವ ಇವರು ಪುತ್ತೂರಿನ ಸೈಂಟ್ ಫಿಲೊಲಮಿನಾ ಕಾಲೇಜಿನ ಬಿಬಿಎ ವಿಭಾಗದ ಉಪನ್ಯಾಸಕರು ಮತ್ತು ಯಕ್ಷಗಾನ ಭಾಗವತರಾಗಿರುವ ಪಂಜದ ಪ್ರಶಾಂತ್ ರೈ ಪಲ್ಲೋಡಿಯವರ ಪತ್ನಿ.







