ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಉತ್ಸವ

0

ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಪುಸ್ತಕ ಬಿಡುಗಡೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಯಾಗಿ ನ್ಯಾಯವಾದಿ ಸವಿತಾ ಭಾಗವಹಿಸಿ ಮಾತನಾಡಿದರು.
ಸ್ವಾಮೀಜಿಯವರ ಮಾತೆಗಿಂತ ಮಿಗಿಲಾದ ಪುಸ್ತಕವನ್ನು ನಿವೃತ್ತ ಎ.ಎಸ್.ಐ ದೇವಯ್ಯ ಗೌಡ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಅಜ್ಜಾವರ ಕರ್ಲಪ್ಪಾಡಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಅಡಪoಗಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಬೆಳಿಗ್ಗೆ ಗಣಹೋಮ, ದುರ್ಗಾಪೂಜೆ, ಭಜನಾ ಸತ್ಸಂಗ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.
ಶಿಕ್ಷಕಿ ಸುನಂದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಆಶ್ರಮದ ಟ್ರಸ್ಟಿ ಪ್ರಣವಿ ಹಾಗೂ ಇತರರು ಉಪಸ್ಥಿತರಿದ್ದರು.