ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಮುಡಿಪು ಪಿಎಂಶ್ರೀ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಭೇಟಿ – ಅಧ್ಯಯನ ಪ್ರವಾಸ

0

ಕೇಂದ್ರ ಸರಕಾರದ ಆqತಕ್ಕೆ ಒಳಪಟ್ಟ ಪಿ ಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ (ಸೆಂಟ್ರಲ್ ಬೋಡ್) ಮುಡಿಪು ಇಲ್ಲಿಯ ೬ ರಿಂದ ೧೨ನೇ ತರಗತಿ ವರೆಗಿನ ಒಟ್ಟು ೫೮೦ ವಿದ್ಯಾರ್ಥಿಗಳು ೭ ಬ್ಯಾಚ್‌ಗಳಲ್ಲಿ ದಿನಾಂಕ: ೮-೧೦-೨೦೨೬ ರಿಂದ ೧೬-೧೦-೨೦೨೬ ರ ವರೆಗೆ ಅಧ್ಯಯನ ಪ್ರವಾಸ ಕೈಗೊಂಡು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಬೇಟಿ ನೀಡಿರುತ್ತಾರೆ.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರು ಹಾಗೂ ವೈದ್ಯಕೀಯ ನಿರ್ದೇಶಕರು ಅಗಿರುವ ಡಾ. ಕೆ. ವಿ ಚಿದಾನಂದ, ಎ.ಒ.ಎಲ್.ಇ ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಚಿದಾನಂದ ಹಾಗೂ ಕವಿಜಿ ಮೆಡಿಕಲ್ ಕಾಲೇಜು ಮತ್ತು ಅಸ್ಪತ್ರೆಯ ಡೀನ್ ಅದ ಡಾ. ನೀಲಾಂಬಿಕೈ ನಟರಾಜನ್ ವಿದ್ಯಾರ್ಥಿಗಳ ಭೇಟಿಗಾಗಿ ಅನುಮತಿ ನೀಡದರು.
ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅನಾಟೋಮಿ ವಿಭಾಗ ಮುಖ್ಯಸ್ಥರಾಗಿರುವ ಪ್ರೊಫೆಸರ್ ಡಾ. ಸಚಿನ್ ಕೆ.ಎಸ್, ಅಸೋಸಿಯೇಟ್ ಪ್ರೊಫೆಸರ್ ಡಾ. ಆಲ್ವಿನ್ ಜೋಶುವಾ, ಸಹಾಯಕ ಪ್ರಾಧ್ಯಾಪಕರು, ಡಾ. ಮೆಲಾನಿ ಡಿಸೋಜ, ಅಸಿಸ್ಟೆಂಟ್ ಪ್ರೊಫೆಸರ್ ಡಾ. ದಿನೇಶ್ ಆರ್. ವಿದ್ಯಾರ್ಥಿಗಳಿಗೆ ಮಾನವ ಶರೀರದ ರಚನಾಶಾಸ್ತ್ರ ಮಾನವ ದೇಹದ ವಿವಿಧ ಅಂಗಗಳ ಆಕಾರ ರಚನೆ ಮತ್ತು ಅವುಗಳ ಜೋಡಣೆಯ ಬಗ್ಗೆ ವಿವರಿಸಿದರು.
ಭಾರತ ಸರಕಾರದ ವಿಜ್ಞಾನ ಜ್ಯೋತಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನವೋದಯದ ವಿದ್ಯಾರ್ಥಿಗಳಾದ ೧೩-೧೦-೨೦೨೬ ರಂದು ಸುಮಾರು ೫೦ ವಿದ್ಯಾರ್ಥಿನಿಯರು ಭೇಟಿ ನೀಡಿದ್ದರು ಈ ವಿದ್ಯಾರ್ಥಿನಿಯರಿಗೆ ವೈದ್ಯಕೀಯ ವಿಜ್ಞಾನ, ಪ್ರಯೋಗಾಲಯದ ಕಾರ್ಯವಿಧಾನಗಳು, ರೋಗ ನಿರ್ಣಯ ಸೌಲಭ್ಯಗಳು ಮತ್ತು ಆರೋಗ್ಯ ವೃತ್ತಿಪರ ಕಾರ್ಯಗಳ ಬಗ್ಗೆ ಮೌಲ್ಯಯುತವಾದ ಪ್ರತ್ಯಕ್ಷ ಅನುಭವ ದೊರೆಯಲು ಕೆವಿಜಿ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಒಂದು ದಿನದ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಯಿತು.

ಡಾ. ಮೋಹನ ಕೃಷ್ಣ, ಡಾ. ಸಾಬಿತ್ ರಹ್‌ಮಾನ,, ಡಾ. ಪೃತ್ವಿಕ್ ರಾಜೇಶ್, ಡಾ. ಶ್ರೀವತ್ಸ, ಡಾ. ರೇಷ್ಮಾ ರಾಯನ್ಸ್, ಡಾ. ಕಿರಣ ಮ್ಯಾಥ್ಯೂ ಕೆ ಇವರು ವಿವರಣೆ ನೀಡಿದರು.
ಎಲ್ಲಾ ಪ್ರಮುಖ ಚಿಕಿತ್ಸಾ ವಿಭಾಗಗಳಾದ: ಜನರಲ್ ಮೆಡಿಸಿನ್, ಶ್ವಾಸಕೋಶ ವಿಭಾಗ, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ, ಮಕ್ಕಳ ಅರೋಗ್ಯ ವಿಭಾಗ, ಮೂಳೆ ಮತ್ತು ಕೀಳು ವಿಭಾಗ, ಚರ್ಮ ರೋಗ ವಿಭಾಗ, ತುರ್ತುಚಿಕಿತ್ಸಾ ವಿಭಾಗ ವಿಬಾಗಗಳಿಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಅವರಿಗೆ ವೈದ್ಯಕೀಯ ವಿವರಣೆ ನೀಡಲಾಯಿತು.
ಅನಾಟೋಮಿ ಮೂಸಿಯಂ, ಪೆಥಾಲೋಜಿ ಮೂಸಿಯಂ, ಫಾರೆನ್‌ಸಿಕ್ ಮೆಡಿಸಿನ್ ಮೂಸಿಯಂ,, ಕಮ್ಯುನಿಟಿ ಮೆಡಿಸಿನ್ ಮೂಸಿಯಂ, ಮೈಕ್ರೋಬಯೋಲೋಜಿ ಮೂಸಿಯಂ ವೀಕ್ಷಣೆ ಮಾಡಿ ಕೇಂದ್ರ ನವೋದಯದ ವಿಜ್ಞಾನ ಜ್ಯೋತಿಯ ವಿದ್ಯಾರ್ಥಿಗಳು ಉಪಯುಕ್ತ ಮಾಹಿತಿಯನ್ನು ಪಡೆದುಕೊಡರು.
ಈ ಪ್ರವಾಸ ಕಾರ್ಯಕ್ರಮದ ಜವಾಬ್ದಾರಿಯನ್ನು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರ್ರೆ, ಸುಳ್ಯ ಇಲ್ಲಿಯ ಉದ್ಯೋಗಿಯಾಗಿರುವ ಶ್ರೀಮತಿ ಕುಸುಮ (ಕೋ-ಅರ್ಡಿನೇಟರ್) ಇವರು ಕೈಗೊಂಡಿದ್ದರು.