ಸುಳ್ಯದಲ್ಲಿ ಡಾ.ಪ್ರಶಾಂತ್ ಬಿ.ಎಸ್.ರವರ ಪ್ರಶಾಂತಿ ಡೆಂಟಲ್ ಕ್ಲಿನಿಕ್ ಶುಭಾರಂಭ

0

ಕಲ್ಮಡ್ಕದ ಡಾ.ಪ್ರಶಾಂತ್ ಬಿ.ಎಸ್.ರವರ ಪ್ರಶಾಂತಿ ಡೆಂಟಲ್ ಕ್ಲಿನಿಕ್ ಇಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಆಶೀರ್ವಾದ್ ಬಿಲ್ಡಿಂಗ್ ನಲ್ಲಿ ಶುಭಾರಂಭಗೊಂಡಿತು.


ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ದೀಪ ಬೆಳಗಿಸಿ ಕ್ಲಿನಿಕ್ ಉದ್ಘಾಟಿಸಿದರಲ್ಲದೆ, ವೈದ್ಯಕೀಯ ಸೇವೆಯ ಸೂಕ್ಷ್ಮಗಳನ್ನು ವಿವರಿಸಿ, ಕಿವಿಮಾತು ಹೇಳಿದರು. ಪುತ್ತೂರಿನ ಪ್ರಕಾಶ್ ಡೆಂಟಲ್ ಕ್ಲಿನಿಕ್ ನ ವೈದ್ಯರು ಹಾಗೂ ಡಾ.ಪ್ರಶಾಂತರ ವೃತ್ತಿ ಗುರುಗಳಾದ ಡಾ.ಶ್ರೀಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ದಂತವೈದ್ಯರುಗಳು ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ ವಿವರಿಸಿ, ಶುಭಹಾರೈಸಿದರು. ಸುಳ್ಯದ ಡೆಂಟಲ್ ಅಸೋಸಿಯೇಶನ್ ಅಧ್ಯಕ್ಷೆ ಡಾ.ವಿದ್ಯಾಶಾರದಾರವರು ಗೌರವ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.


ಆಶೀರ್ವಾದ್ ಬಿಲ್ಡಿಂಗ್ ಮಾಲಕಿ ಶ್ರೀಮತಿ ನಮಿತಾ ಜೆ.ಶೆಟ್ಟಿ ಶುಭಕೋರಿ ಮಾತನಾಡಿದರು.
ಡಾ.ಪ್ರಶಾಂತ್ ಬಿ.ಎಸ್. ಸ್ವಾಗತಿಸಿದರು. ಡಾ.ಪ್ರಶಾಂತರ ತಂದೆ ಗುಣಶೇಖರ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಡಾ.ಪ್ರಶಾಂತರ ಗುರುಗಳಾದ ಡಾ.ಶ್ರೀಪ್ರಕಾಶ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊನೆಯಲ್ಲಿ ಸಾಮೂಹಿಕವಾಗಿ ಸತ್ಯಸಾಯಿಬಾಬಾರವರ ಪ್ರಾರ್ಥನೆ ಹಾಡಿ ಆರತಿ ಬೆಳಗಲಾಯಿತು. ಡಾ.ಪ್ರಶಾಂತರ ತಾಯಿ, ಸಹೋದರಿ, ಅಜ್ಜಿ, ಚಿಕ್ಕಪ್ಪಂದಿರು, ಬಂಧುಗಳು ಉಪಸ್ಥಿತರಿದ್ದರು.