













ಸುಳ್ಯ ದಸರಾ ೨೦೨೬ ಪ್ರಯುಕ್ತ ಸುಳ್ಯ ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿ ಮಹಿಳಾ ದಸರಾ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಉದ್ಘಾಟನಾ ಸಮಾರಂಭ ನಡೆಯಿತು. ಸುಳ್ಯ ಶಾಸಕಿ ಕು. ಭಾಗೂರಥಿ ಮುರುಳ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮಹಿಳಾ ದಸರ ಸಮಿತಿ ಅಧ್ಯಕ್ಷೆ ಶ್ರೀಮತಿ ಲತಾ ಮಧುಸೂದನ್, ದಸರಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಶ್ರೀಮತಿ ಯಶೋಧಾ ರಾಮಚಂದ್ರ ಹಾಗೂ ಎಲ್ಲಾ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಎನ್.ಎ.ರಾಮಚಂದ್ರ, ಗೋಕುಲ್ದಾಸ್, ನವೀನ್ಚಂದ್ರ ಬೆಂಗಳೂರು, ಬೆಳ್ಯಪ್ಪ ಗೌಡ, ಸುನಿಲ್ ಕೇರ್ಪಳ, ಚಂದ್ರಶೇಖರ ಅಡ್ಪಂಗಾಯ ಮೊದಲಾದವರು ಇದ್ದರು. ನಂತರ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯುತು.

ಸಂಜೆ ಶ್ರೀ ಮಿತ್ತೂರು ಉಳ್ಳಾಕುಳು ಮಹಿಳಾ ಭಜನಾ ಮಂಡಳಿ ಅಮೈ ಮಡಿಯಾರು ಉಬರಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ನಂತರ ರಂಗಮಯೂರಿ ಕಲಾ ಶಾಲೆ ಸುಳ್ಯ ಇವರಿಂದ ಕಾರ್ಯಕ್ರಮ ವೈವಿಧ್ಯ, ರಾತ್ರಿ ಮಹಾಪೂಜೆ ನಡೆಯಲಿರುವುದು.








