













ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಅ.19ರಂದು ದುರ್ಗಾಷ್ಠಮಿಯಂದು ದುರ್ಗಾಪೂಜೆ, ಆಯುಧಪೂಜೆ ಮತ್ತು ತೆನೆಹಬ್ಬ ನಡೆಯಿತು.ಬೆಳಿಗ್ಗೆ ಗಂಟೆ 9 ರಿಂದ ದುರ್ಗಾ ಪೂಜೆ ಆರಂಭಗೊಂಡು,ಆಯುಧಪೂಜೆ ನಡೆಯಿತು.

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಪುರೋಹಿತರಾದ ರಾಧಾಕೃಷ್ಣ ಭಟ್ ಜೋಗಿಯಡ್ಕ ಮತ್ತು ಬಳಗ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶ್ರೀ ದುಗ್ಗಲಾಯ ದೈವಸ್ಥಾನದ ಅನುವಂಶಿಕ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ, ಸೇವಾ ಸಮಿತಿ ಅಧ್ಯಕ್ಷರಾದ ಕುಶಾಲಪ್ಪ ಗೌಡ ಕಜೆ, ಕಾರ್ಯದರ್ಶಿ ಶೇಖರ್ ಕುದ್ಪಾಜೆ, ಮಾಜಿ ಅಧ್ಯಕ್ಷರುಗಳಾದ ಸುಂದರ ರಾವ್, ದಯಾನಂದ ಸಾಲಿಯಾನ್ ಮೂಡೆಕಲ್ಲು, ಉಪಾಧ್ಯಕ್ಷರಾದ ನಾರಾಯಣ ಮಣಿಯಾಣಿ, ಯುವ ಸೇವಾ ಸಮಿತಿಯ ಅಧ್ಯಕ್ಷರಾದ ನಾರಾಯಣ ನಾಯ್ಕ, ಸಮಿತಿಗಳ ಸದಸ್ಯರು, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.







