













ಕೊಡಿಯಾಲ ಗ್ರಾಮದ ಕೂಡಣಕಟ್ಟೆ ಯಲ್ಲಿ 4ನೇ ವರ್ಷದ ಶಾರದಾ ಪೂಜೆ ಅ.17 ರಂದು ನಡೆಯಿತು.

ದಯಾಕರ ಆಳ್ವ ಕುಂಬ್ರರವರು ದೀಪ ಬೆಳಗಿಸಿದರು. ಜಿತ್ ಕಿರಣ್ ಮರಿಕೆಯಿ ಶಾರದಾ ದೇವಿಗೆ ಆರತಿ ಬೆಳಗಿದರು. ಮಕ್ಕಳಿಂದ ಭಜನಾಕಾರ್ಯಕ್ರಮ ನಡೆಯಿತು. ಬಾಚೊಡಿ ವೆಂಕಟೇಶ್ ಪೈ,ದೇವದಾಸ್ ರೈ ಯವರು ಮಾತನಾಡಿ ಶುಭ ಹಾರೈಸಿದರು.ಊರಿನ ಲೈನ್ ಮ್ಯಾನ್ ಮಹಾಂತೇಶ್ ಅವರ ಉತ್ತಮ ಸೇವೆಯನ್ನು ಗುರುತಿಸಿ ಊರಿನ ಜನರ ಪರವಾಗಿ ಸನ್ಮಾನ ಕಾರ್ಯಕ್ರಮ ಮಾಡಲಾಯಿತು. ವಿನೋದ ಶೆಟ್ಟಿ ಸಾಧನಾ ಮನೆ ,
ಕಾರ್ಯಕ್ರಮದಲ್ಲಿ ಪರ ಊರಿನ ಗಣ್ಯರು ,ಊರಿನ ಗಣ್ಯರು,ಜನರು ಮಕ್ಕಳು,ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೊರಗಪ್ಪ ಮರಿಕೆಯಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ,ವಂದಿಸಿದರು.ಗಿರೀಶ್ ಸಹಕರಿಸಿದರು.







