ಮುರುಳ್ಯ ಗ್ರಾಮದ ದೇವರಕಾನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಅ. 19 ಮತ್ತು 20 ರಂದು ನವರಾತ್ರಿ ಉತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು, ವಾಹನ ಪೂಜೆ, ರಂಗ ಪೂಜೆ, ವಿದ್ಯಾರಂಭ, ತೆನೆ ಹಬ್ಬ, ತೆನೆ ವಿತರಣೆ, ಹಾಗೂ ನವಾನ್ನ ಭೋಜನ ನಡೆಯಿತು.















ದೇವಳದ ಅಭಿವೃದ್ಧಿ ಕುರಿತು ಸಭೆ
ದೇವಳದ ಅಭಿವೃದ್ಧಿ ಕುರಿತು ಸಭೆ ನಡೆಯಿತು.
ಟ್ರಸ್ಟ್ ನ ಅಧ್ಯಕ್ಷ ಪಿ ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿ ಮಾತಾಡಿದರು, ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ವಸಂತ ಬೆಳ್ಳಾರೆಯವರು ದೀಪ ಪ್ರಜ್ವಲನೆ ಮಾಡಿ ಆರ್ಥಿಕ ಕ್ರೋಡೀಕರಣ ಹೇಗೆ ಮಾಡುವುದು? ಜನರನ್ನು ಹೇಗೆ ಮಾತಾಡಿಸಬೇಕು, ಸ್ಪಂದನೆ ಹೇಗಿರಬೇಕು ಎಂದು ತಿಳಿಸಿದರು. ಶಾಸಕಿ ಕು. ಭಾಗೀರಥಿ ಮುರುಳ್ಯರವರು ಉಪಸ್ಥಿತಿ ಇದ್ದು ಸರಕಾರದ ಅನುದಾನ ಮುರುಳ್ಯ ಗ್ರಾಮ ಹಾಗೂ ದೇವಸ್ಥಾನ ಡಾ ರಸ್ತೆಗಳಿಗೆ ಅನುದಾನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದರು.

ನಿವೃತ್ತ ಶಿಕ್ಷಕ ರಾದ ವೆಂಕಪ್ಪ ಗೌಡ ಮಾತನಾಡಿದರು. ಸುಬ್ರಮಣ್ಯ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರು ರವಿ ಕಕ್ಕೆ ಪದವು, ನಿಂತಿಕಲ್ಲು ಉದ್ಯಮಿ ಹಾಗೂ ಸಾನಿದ್ಯ ಕಾಂಪ್ಲೆಕ್ಸ್ ಮಾಲಕ ತಿಮ್ಮಪ್ಪ ಗೌಡ ಮಲ್ಲಾರ ಮುಖ್ಯ ಅತಿಥಿ ಗಳಾಗಿದ್ದರು.

ದೀವಿಷ್ ಎಂ ಬಿ ಮುರುಳ್ಯ ಪ್ರಸ್ತಾವನೆ ಗೈದರು ನ್ಯಾಯವಾದಿ ಜಗದೀಶ್ ಹುದೇರಿ ಆರ್ಥಿಕ ಸ್ಥಿತಿ ಗತಿ ಹೊಂದಾಣಿಕೆ ನಿರ್ವಹಣೆ ಬಗ್ಗೆ ವಿಷಯ ಮಂಡನೆ ಮಾಡಿದರು. ಶ್ರೀಮತಿ ನಯನ ದೀವಿಷ್ ಪ್ರಾರ್ಥನೆ ಮಾಡಿದರು. ಟ್ರಸ್ಟ್ ಕಾರ್ಯದರ್ಶಿ ಅನುಪೂ ಬಿಳಿಮಲೆ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕರು ಕಳತ್ತಜೆ ಸೀತಾರಾಮ ಕೆ.ಜಿ. ಕಾರ್ಯ ಕ್ರಮ ನಿರೂಪಣೆ ಮಾಡಿದರು.
ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ







