













ಕಲ್ಲುಗುಂಡಿ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಸ್ಥಳೀಯ ಮುಸ್ಲಿಂ ಮುಖಂಡರು ಸೌಹಾರ್ದತೆಯನ್ನು ಮೆರೆದಿದ್ದಾರೆ.
ಕಲ್ಲುಗುಂಡಿ ಮುತ್ತು ಮಾರಿಯಮ್ಮ ನವರಾತ್ರಿ ಹಬ್ಬದ ಸಂಭ್ರಮದ ಅಂಗವಾಗಿ ಅ 20 ರಂದು ಕಲ್ಲುಗುಂಡಿ ಪೇಟೆಯಲ್ಲಿ ನಡೆದ ಸಂಭ್ರಮದ ಮೆರವಣಿಗೆಯಲ್ಲಿ ಬಂದ ಭಕ್ತಾದಿಗಳಿಗೆ ಕೂಲಿಶೆಡ್ ಬಳಿ ಮುಸ್ಲಿಂ ಬಾಂದವರು ತಂಪು ಪಾನೀಯ ವಿತರಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ , ಪಂಚಾಯತ್ ಮಾಜಿ ಸದಸ್ಯರಾದ ಎ. ಕೆ. ಹನೀಫ್, ಅರಫಾ ಹೋಟೆಲ್ ಮಾಲಕರಾದ ಲತೀಫ್ ಅರಫಾ, ಅಂಬುಲೆನ್ಸ್ ಚಾಲಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ತಾಜುದ್ದೀನ್ ಟರ್ಲಿ,ಅಬ್ಬಾಸ್ ಕೆ.ಕೆ ನೇತೃತ್ವದ ತಂಡವು ಈ ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಂಡು ನವರಾತ್ರಿ ಹಬ್ಬದಲ್ಲಿ ಸೌಹಾರ್ದತೆಯನ್ನು ಮೆರೆದಿದ್ದಾರೆ.







