ಸುಳ್ಯ ಪೊಲೀಸ್ ಠಾಣೆಯಲ್ಲಿ ಪುರೋಹಿತ ಬ್ರಹ್ಮಶ್ರೀ ನಾಗರಾಜ ಭಟ್ ಹಾಗೂ ಶ್ರೀಪಾದ ಭಾರದ್ವಾಜ್,ಶಶಾಂಕ್ ಭಟ್ ನೆಯ್ಯೋಣಿಯವರ
ಪೌರೋಹಿತ್ಯದಲ್ಲಿ ಆಯುಧಪೂಜೆ ಹಾಗೂ ವಾಹನ ಪೂಜೆ ಅ.೨೦ ರಂದು ನಡೆಯಿತು.















ಇಲಾಖೆಯ ಮತ್ತು ಸಿಬ್ಬಂದಿಗಳ ಎಲ್ಲಾ ವಾಹನಗಳಿಗೆ ,ಠಾಣಾ ಆಯುಧ ಸಾಮಾಗ್ರಿಗಳಿಗೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್,ಠಾಣಾ ಉಪ ನಿರೀಕ್ಷಕರಾದ ಉದಯ ರವಿ, ಎ ಎಸ್ ಐ ತಾರನಾಥ್, ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಡಾ.ಡಿ ವಿ ಲೀಲಾದರ್,ಧನಂಜಯ ಅಡ್ಪಂಗಾಯ,ವಿನಯ ಕುಮಾರ್ ಕಂದಡ್ಕ,ಎಂ ವೆಂಕಪ್ಪಗೌಡ,ರಾಧಾಕೃಷ್ಣ ಬೊಳ್ಳೂರು, ಪಿ ಎ ಮಹಮ್ಮದ್,ಭವಾನಿ ಶಂಕರ್ ಕಲ್ಮಡ್ಕ,ಹೇಮಂತ್
ಕಾಮತ್,ರಂಜಿತ್ ಪೂಜಾರಿ, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶರೀಫ್ ಜಟ್ಟಿಪಳ್ಳ ಸೇರಿದಂತೆ ವಿವಿಧ ಮುಖಂಡರುಗಳು ಭಾಗವಹಿಸಿದ್ದರು.







