ಕಾಯರ್ತೊಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕದಿರು ಕಟ್ಟುವುದು, ನವಾನ್ನ ಸಮಾರಾಧನೆ

0

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕದಿರು ಕಟ್ಟುವುದು, ನವಾನ್ನ ಸಮಾರಾಧನೆಯು ಅ.21ರಂದು ನಡೆಯಿತು.

ಬೆಳಿಗ್ಗೆ ಕದಿರು ಕಟ್ಟುವುದು , ಕದಿರು ವಿತರಣೆ, ಮಧ್ಯಾಹ್ನ ಶ್ರೀ ದೇವರಿಗೆ ಸರ್ವಾಲಂಕಾರ ಸಹಿತ ಮಹಾಪೂಜೆ,ನಂತರ
ಮಧ್ಯಾಹ್ನ ನವಾನ್ನ ಸಮಾರಾಧನೆ (ಹೊಸ ಅಕ್ಕಿ ಊಟ) ನಡೆಯಿತು.

ಪುರೋಹಿತ ಶಿವಶಂಕರ ಭಟ್ ಜೋಗಿಯಡ್ಕ ಪೌರೋಹಿತ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ
ಎಂ. ವೆಂಕಪ್ಪ ಗೌಡ, ವ್ಯವಸ್ಥಾಪನಾ ಸಮಿತಿಯ ಸದಸ್ಯರು,ಸೇವಾ ಸಮಿತಿ ಸಂಚಾಲಕ ಸಹ ಸಂಚಾಲಕ ಮಿತ್ರ ಬಳಗ ಕಾಯರ್ತೋಡಿ ಇದರ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.