ಕೇರ್ಪಡ ಶ್ರೀ ಮಹಿಷ ಮರ್ದಿನೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಧಾರ್ಮಿಕ ಸಭೆ

0

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷ ಮರ್ದಿನೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿದ ಸುಳ್ಯ ಶಾಸಕರಾದ ಕು ಭಾಗೀರಥಿ ಮುರುಳ್ಯ ಮಾತನಾಡಿ, ಧರ್ಮ ಜಾಗೃತಿಯೊಂದಿಗೆ ಸಂಸ್ಕಾರ ಮೈಗೂಡಿಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಲ್ಲಿ ಶ್ರೀ ಮಾತೆಯ ಅನುಗ್ರಹ ಪ್ರಾಪ್ತಿಯಾಗುವುದು. ಇದು ಕೇರ್ಪಡ ಜನತೆಯಲ್ಲಿ ಕಾಣುವಂತಾಗಿದೆ ಎಂದು ಹೇಳಿದರು.


ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎನ್ ಜಿ ಲೋಕನಾಥ ರೈ ಯವರು ಸಭಾಧ್ಯಕ್ಷತೆ ವಹಿಸಿ ಸ್ವಾಗತ ಮಾಡಿದರು. ಮುಖ್ಯ ಅತಿಥಿಗಳಾಗಿ ಸುಬ್ರಮಣ್ಯ ದೇವಸ್ಥಾನ ಡಾ. ವ್ಯವಸ್ಥಾಪನ ಸಮಿತಿ ಸದಸ್ಯೆ ಶ್ರೀಮತಿ ಪ್ರವೀಣಾ ಪ್ರಶಾಂತ್ ರೈ ಮರುವಂಜ, ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ನ್ಯಾಯವಾದಿ ಜಗದೀಶ್ ಹುದೇರಿ, ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಭುವನೇಶ್ವರ ಪೂದೆ,, ಉದ್ಯಮಿಗಳು ಹಾಗೂ ಶ್ರೀ ಮೂಕಾಂಬಿಕಾ ಅಸೋಸಿಯೇಟ್ಸ್, ಮತ್ತು ಶ್ರೀ ಲಕ್ಷ್ಮಿ ಅಸೋಸಿಯೇಟ್ಸ್ ಬೆಂಗಳೂರು ಸಂತೋಷ್ ಕುಮಾರ್ ಅಲೆಕ್ಕಾಡಿ ವೇದಿಕೆಯಲ್ಲಿದ್ದು ಮಾತಾಡಿದರು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ಲೋಕೇಶ್ ಕೇರ್ಪಡ, ವಾಚಣ್ಣ ಹುದೇರಿ, ಗುಣವತಿ ನಾವೂರು, ವೇಣುಗೋಪಾಲ ರೈ ಕಲ್ಲೇರಿ, ಪ್ರಮೋದ್ ರೈ ಕಟ್ಟ ಹೊಸಜಾಲು,, ಬಿಜಿಲ ಅಲೆಕ್ಕಾಡಿ, ಕಸ್ತೂರಿ ಚಂದ್ರಶೇಖರ್ ಅತಿಥಿಗಳನ್ನು ಬರ ಮಾಡಿಕೊಂಡರು.
ಎಣ್ಮೂರು ಪ್ರದೀಪ್ ರೈ ಕಾರ್ಯಕ್ರಮ ನಿರೂಪಣೆ ಮಾಡಿದರು. ಲೋಕೇಶ್ ಕೇರ್ಪಡ ವಂದಿಸಿದರು.

ಪ್ರತಿ ದಿನ ಬೆಳಿಗ್ಗೆ ವಾಹನ ಪೂಜೆ, ವಿಜಯ ದಶಮಿ ದಿನದಂದು ಬೆಳಿಗ್ಗೆ ಆಯುಧ ಪೂಜೆ, ಬಳಿಕ ವಾಹನ ಪೂಜೆ ನಡೆಯಿತು. ಅ. 21 ರಂದು ಗಣಪತಿ ಹವನ, ಮಕ್ಕಳಿಗೆ ಅಕ್ಷರಬ್ಯಾಸ, ಮಹಾ ಪೂಜೆ,ಮಹಾ ಸಂಪ್ರೋಕ್ಷಣೆ, ಅನ್ನ ಸಂತರ್ಪಣೆ ನಡೆಯಿತು.
ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ