














ಎಡಮಂಗಲ ಗ್ರಾಮದ ಪಟ್ಲದ ಮೂಲೆ ಶ್ರೀ ಆದಿಪರಾಶಕ್ತಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ ಅ.11ಕ್ಕೆ ಆರಂಭಗೊಂಡು ಅ.20ರವರೆಗೆ ನಡೆಯಿತು.

ಅ.20 ರಂದು ಬೆಳಿಗ್ಗೆ ಮತ್ತು ಮಧ್ಯಾಹ್ನ ವಿಶೇಷ ಪೂಜೆ, ರಾತ್ರಿ ಆಯುಧ ಪೂಜೆ, ವಾಹನ ಪೂಜೆ, ಶ್ರೀದೇವಿಗೆ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಭಜನಾ ಕಾರ್ಯಕ್ರಮ ನಡೆಯಿತು. ವಿಶೇಷವಾಗಿ ಹೂವಿನಪೂಜೆ, ಮಹಾಪೂಜೆ, ಪಂಚಕಜ್ಜಾಯ, ಕುಂಕುಮಾರ್ಚನೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಮಾಯಿಲಪ್ಪ ಗೌಡ ಪಟ್ಲದಮೂಲೆ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು..







