ಅ. 25:ಪೂದೆ  ಅವಳಿ ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

0

ಮುರುಳ್ಯ, ಪೂದೆ, ಶ್ರೀ ಗಣಪತಿ ಮಲ್ಲಿಕಾರ್ಜುನ ಮತ್ತು ಶ್ರೀ ಮಹಾವಿಷ್ಣು ದೇವಸ್ಥಾನಗಳ ಜೀರ್ಣೋದ್ದಾರ ಕಾಮಗಾರಿಗಳು ಬಹುತೇಕ ಮುಗಿದು ಶೀಘ್ರದಲ್ಲಿ ಬ್ರಹ್ಮ ಕಲಶೋತ್ಸವ ನಡೆಯಲಿರುವುದು.
ಆ ಪ್ರಯುಕ್ತ ವ್ಯವಸ್ಥಾಪನ ಸಮಿತಿಯವರು ಉತ್ಸವ ಸಮಿತಿ ಭಜನಾ ಮಂಡಳಿ ಹಾಗೂ ಶ್ರೀ ದೇವರ ಭಕ್ತರು ದೇವಸ್ಥಾನಕ್ಕೆ ಸಂಬಂಧ ಪಟ್ಟ ಗ್ರಾಮಗಳ ಕೂಡುವಿಕೆಯಲ್ಲಿ ಅ. 25ರಂದು ಪೂ. 10 ಗಂಟೆಗೆ ಪೂರ್ವಭಾವಿ ಸಭೆ ನಡೆಯಲಿರುವುದು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ದೇವಳದ ಪ್ರಕಟಣೆ ತಿಳಿಸಿದೆ.