ಬಾಳುಗೋಡು ಬೆಟ್ಟುಮಕ್ಕಿ ಪೊಯ್ಕೆಗದ್ದೆ ಶ್ರೀ ದೇವಿಯ ಸನ್ನಿಧಿಯಲ್ಲಿ 41 ನೇ ನವರಾತ್ರಿ ಕಾರ್ಯಕ್ರಮಗಳು ಸಂಪನ್ನ

0

ಬಾಳುಗೋಡು ಬೆಟ್ಟುಮಕ್ಕಿ ಪೊಯ್ಕೆಗದ್ದೆ ಶ್ರೀ ದೇವಿಯ ಸನ್ನಿಧಿಯಲ್ಲಿ 41ನೇ ವರ್ಷದ ನವರಾತ್ರಿ ಪೂಜಾ ಕಾರ್ಯಕ್ರಮಗಳು ಅ.11 ರಂದು ಆರಂಭವಾಗಿ ಅ.21 ರಂದು ಸಂಪನ್ನವಾಯಿತು.

ಅ.11 ರ ಬೆಳಿಗ್ಗೆ ಗಣಹೋಮ , ಶ್ರೀ ದೇವಿಯ ಗದ್ದಿಗೆ ಏರುವುದು ಕಾರ್ಯಕ್ರಮ ನಡೆಯಿತು. ಬಳಿಕ ನಾಗತಂಬಿಲ ನಡೆಯಿತು. ರಾತ್ರಿ ದೇವಿ ಪೂಜೆ ಅನ್ನಸಂತರ್ಪಣೆ. ನಡೆಯಿತು. ‌ಬಳಿಕ ದಿನಂಪ್ರತಿ ಪೂಜೆ ನಡೆದು ಅ.21ರ ಬೆಳಿಗ್ಗೆ ಗಂಟೆ 10ರ ನಂತರ ತಡೆಕಾಯಿ ಕೊಡುವ ಕಾರ್ಯಕ್ರಮ ನಡೆಯಿತು. ಅಂದು ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ರಾತ್ರಿ ದುರ್ಗಾಪೂಜೆ ಪೂಜೆ ನವರಾತ್ರಿ ಕಾರ್ಯಕ್ರಮಗಳು ಸಂಪನ್ನವಾಯಿತು.