













ಮಡಪ್ಪಾಡಿ ಗ್ರಾಮದ ಅಂಬೆಕಲ್ಲು ಹೂವಪ್ಪ ಗೌಡ ಎಂಬವರು ಇಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಅವರು ಹಲವು ಸಮಯಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದರು.
ಹೂವಪ್ಪ ಗೌಡರು ಇಂದು ಆರೋಗ್ಯದಲ್ಲಿ ಏರು ಪೇರಾದ ಕಾರಣ ಸುಳ್ಯಕ್ಕೆ ಕರೆತರುವಾಗ ದಾರಿ ಮಧ್ಯೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಮೃತರು ಪತ್ನಿ ಬಲ್ಕಜೆ ಅಂಗನವಾಡಿ ಕಾರ್ಯಕರ್ತೆ ನೀಲಾವತಿ, ಪುತ್ರರಾದ ಮಡಪ್ಪಾಡಿ ಗ್ರಾ. ಪಂ. ಸಿಬ್ಬಂದಿ ತನುರಾಜ್, ಮಂಗಳೂರಿನಲ್ಲಿ ಉದ್ಯೋಗಿಯಾಗಿರುವ ಸುಜನ್ ಹಾಗೂ ಬಂದುಗಳನ್ನು ಅಗಲಿದ್ದಾರೆ.







