ಸುಳ್ಯ ಅನ್ಸಾರುಲ್ ಮುಸ್ಲಿಮಿನ್ ಅಸೋಸಿಯೇಶನ್ ವತಿಯಿಂದ ಸ್ವಚ್ಛತಾ ಜಾಗೃತಿ ಅರಿವು ಕಾರ್ಯಕ್ರಮ

0

ಸ್ವಚ್ಛತಾ ಆಂದೋಲನದ ಮಾಸಾಚರಣೆಯ ಕರಪತ್ರ ಬಿಡುಗಡೆ

ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಸಂಸ್ಥೆಯ ವತಿಯಿಂದ ನಡೆಸಲು ಉದ್ದೇಶಿಸಿರುವ ಸ್ವಚ್ಛತಾ ಆಂದೋಲನದ ಮಾಸಾಚರಣೆಯ ಭಾಗವಾಗಿ ಗಾಂಧಿನಗರ ಜಮಾಅತಿನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕಂಡರಿ ಮದರಸ ವಿದ್ಯಾರ್ಥಿಗಳಿಗಾಗಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಉಪನ್ಯಾಸ ಹಾಗೂ ಕರಪತ್ರ ಬಿಡುಗಡೆ ಮತ್ತು ವಿತರಣಾ ಕಾರ್ಯಕ್ರಮ ಅ 25 ರಂದು ಮದ್ರಸಾ ಸಭಾಂಗಣದಲ್ಲಿ ನಡೆಯಿತು.

ಗಾಂಧಿನಗರ ಜುಮಾ ಮಸೀದಿಯ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ರವರು ಸ್ವಚ್ಛತೆಯ ಬಗ್ಗೆ ಉಪನ್ಯಾಸ ನೀಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಹಾಜಿ ಕೆ ಬಿ ಇಬ್ರಾಹಿಂ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮದರಸ ಸದರ್ ಮೊಅಲ್ಲಿಂ ಸಿರಾಜುದ್ದೀನ್ ಸಖಾಫಿ, ಮುದರ್ರಿಸ್ ಮುಬಶ್ಶಿರ್ ಅಹ್ಸನಿ ಕೊಂಡಂಗೇರಿ ರವರು ಸ್ವಚ್ಛತೆಯ ಬಗ್ಗೆ ಮಾತನಾಡಿ ಆಂದೋಲನಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಹಾಜಿ ಕೆಎಂಎಸ್ ಮಹಮ್ಮದ್, ಸುಳ್ಯ ನಗರ ಸೂಡ ಅಧ್ಯಕ್ಷರಾದ ಹಾಜಿ ಕೆಎಂ ಮುಸ್ತಫ, ಮಸೀದಿ ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಸ್ವಚ್ಛತಾ ಆಂದೋಲನದ ಸಂಚಾಲಕರಾದ ಯಾಕೂಬ್ ಎಸ್ ಟಿ , ಅನ್ಸಾರ್ ಮಾಜಿ ಅಧ್ಯಕ್ಷರಾದ ಅಬ್ದುಲ್ಲಾ ಕಟ್ಟೆಕ್ಕಾರ್ಸ್ , ಹಿರಿಯರಾದ ಹಾಜಿ ಅಬ್ದುಲ್ ಗಫಾರ್ ಹಾಗೂ ಮದ್ರಸ ಮೊಅಲ್ಲಿಮ್ ವೃಂದದವರು ಮತ್ತು ಅನ್ಸಾರ್ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
ಅಧ್ಯಕ್ಷರಾದ ಕೆ ಬಿ ಇಬ್ರಾಹಿಂ ಸ್ವಾಗತಿಸಿ ಉಪಾಧ್ಯಕ್ಷರಾದ ಶಾಫಿ ಕುತ್ತಮೊಟ್ಟೆ ವಂದಿಸಿದರು.