













ಸುಳ್ಯ ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆಯಲ್ಲಿ ಸುಳ್ಯ ಆಂಬುಲೆನ್ಸ್ ಚಾಲಕ–ಮಾಲಕರ ಸಂಘದ ಸದಸ್ಯರು ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸುವ ಮೂಲಕ ಸೌಹಾರ್ದತೆ, ಮಾನವೀಯತೆ ಹಾಗೂ ಸೇವಾ ಮನೋಭಾವ ಮೆರೆದಿದ್ದಾರೆ.

ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸುವ ಮೂಲಕ ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ ಮತ್ತು ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
ಜೀವ ಉಳಿಸುವುದಷ್ಟೇ ಅಲ್ಲ, ಜನರ ಹೃದಯ ಗೆಲ್ಲುವುದರಲ್ಲಿಯೂ ನಾವು ಮುಂದು ಎಂಬುದನ್ನು ಸುಳ್ಯ ಆಂಬುಲೆನ್ಸ್ ಚಾಲಕ–ಮಾಲಕರ ಸಂಘದ ಸದಸ್ಯರು ತಮ್ಮ ಸೇವಾ ಕಾರ್ಯದ ಮೂಲಕ ಜನಮನ ಗೆದ್ದಿದ್ದಾರೆ.







