













ಅಂಚೆ ಸೇವೆಯ ಮಹತ್ವವನ್ನು ಅರಿತು, ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯ ಬದ್ಧತೆಯಿಂದ ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಸುಳ್ಯದ ಅಂಚೆ ಸಿಬ್ಬಂದಿ ಎಸ್. ಬಾಬುರವರ ಸೇವೆಯನ್ನು ಗುರುತಿಸಿ ಜೇಸಿಐ ಸುಳ್ಯ ಸಿಟಿ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್
ಗೌರವವನ್ನು ನೀಡಿ ಅ. 24 ರಂದು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೇಸಿಐ ಸುಳ್ಯ ಸಿಟಿ ಘಟಕದ ಅಧ್ಯಕ್ಷೆ
ಶ್ರೀಮತಿ ನಾಗವೇಣಿ ದಾಮೋದರ ಕೋರಡ್ಕ, ಅಂಚೆ ಇಲಾಖೆಯ ಪೋಸ್ಟ್ಮಾಸ್ಟರ್ ಚಂದ್ರಶೇಖರ ಬಳ್ಳಕ್ಕ, ವಲಯ ಸಂಯೋಜಕ ವಿಷ್ಣು ಪ್ರಕಾಶ್ ನಾರ್ಕೋಡು, ಘಟಕದ ಸ್ಥಾಪಕಾಧ್ಯಕ್ಷ ಮನಮೋಹನ್ ಬಳ್ಳಡ್ಕ, ಪೂರ್ವಾಧ್ಯಕ್ಷರಾದ ವಿನಯರಾಜ್ ಮಡ್ತಿಲ, ರಂಜಿತ್ ಪಿ.ಜೆ., ಘಟಕದ ಸದಸ್ಯರಾದ ಉಮಾದೇವಿ ಯು.ಕೆ, ಪ್ರಮೀಳಾ ಮನಮೋಹನ್ ಬಳ್ಳಡ್ಕ ಉಪಸ್ಥಿತರಿದ್ದರು.







