ಐವರ್ನಾಡಿನ ಬಹುಕಾಲದ ರಸ್ತೆ ಅಭಿವೃದ್ಧಿಯ ಬೇಡಿಕೆ

0

ಸುಳ್ಯ ಶಾಸಕರನ್ನು ಭೇಟಿಯಾದ ಐವರ್ನಾಡಿನ ಪರ್ಲಿಕಜೆ–ನಿಡುಬೆ–ಕೊಚ್ಚಿ ರಸ್ತೆಯ ಫಲಾನುಭವಿಗಳ ನಿಯೋಗ

ಐವರ್ನಾಡು ಗ್ರಾಮದ ಪರ್ಲಿಕಜೆ–ನಿಡುಬೆ–ಕೊಚ್ಚಿ (ಜಬಳೆ–ಕುದುಂಗು ಮಾರ್ಗವಾಗಿ) ರಸ್ತೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ರಸ್ತೆ ಫಲಾನುಭವಿಗಳ ಪರವಾಗಿ ಗ್ರಾಮಸ್ಥರ ನಿಯೋಗವು ಅ.25 ರಂದು ಸುಳ್ಯ ಶಾಸಕರ ನಿವಾಸದಲ್ಲಿ ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ರಸ್ತೆ ಅಭಿವೃದ್ಧಿಯ ಕುರಿತು ಚರ್ಚಿಸಿತು.
ಹಲವು ವರ್ಷಗಳಿಂದ ಸಮರ್ಪಕ ಅಭಿವೃದ್ಧಿ ಕಾಣದೆ ಉಳಿದಿರುವ ಈ ರಸ್ತೆ, ಸ್ಥಳೀಯ ನಿವಾಸಿಗಳ ನಿತ್ಯ ಸಂಚಾರಕ್ಕೆ ಅತ್ಯಂತ ಅಗತ್ಯವಾಗಿದ್ದು, ಸುಳ್ಯ ಮತ್ತು ಪುತ್ತೂರು ತಾಲೂಕುಗಳ ನಡುವಿನ ಸಂಪರ್ಕ ಮಾರ್ಗವಾಗಿಯೂ ಮಹತ್ವ ಹೊಂದಿದೆ. ರಸ್ತೆಯ ಹದಗೆಟ್ಟ ಸ್ಥಿತಿ ಹಾಗೂ ಅದರ ಪರಿಣಾಮವಾಗಿ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳನ್ನು ಶಾಸಕರ ಗಮನಕ್ಕೆ ತರಲಾಯಿತು. ವಿಶೇಷವಾಗಿ, ಸಂಪೂರ್ಣ ರಸ್ತೆಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ನಿಯೋಗದ ಮನವಿಯನ್ನು ಆಲಿಸಿದ ಶಾಸಕರು, ವಿಷಯದ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದರು. ಹಲವು ವರ್ಷಗಳಿಂದ ಬಾಕಿಯಿರುವ ರಸ್ತೆ ಅಭಿವೃದ್ಧಿಯ ಬೇಡಿಕೆಗೆ ಸೂಕ್ತ ಪರಿಹಾರ ದೊರೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಸಕಾರಾತ್ಮಕ ಕ್ರಮಗಳು ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜೆ‌ ಟಿ ವೆಂಕಪ್ಪ, ಬಾಲಕೃಷ್ಣ ಕೊಚ್ಚಿ, ಮುರಳೀಧರ ಕೊಚ್ಚಿ, ಅಶ್ವಥ್ ಜಬಳೆ, ಮಹೇಶ್ ಜಬಳೆ, ಗಣೇಶ್ ಕೊಚ್ಚಿ, ಸಾತ್ವಿಕ್ ಕುದುಂಗು, ಪದ್ಮನಾಭ ಕರ್ಕುಂಜ ನಿಡುಬೆ, ಶರತ್ ಜಬಳೆ, ಸಚಿನ್ ಕೆ ಬಿ, ಜೀವನ್ ಜಬಳೆ, ಸಚಿನ್ ಕೊಚ್ಚಿ, ಈಶ್ವರ ಕೊಚ್ಚಿ, ದಯಾನಂದ ಕುದುಂಗು, ಕಿಶನ್ ಜಬಳೆ ಹಾಗೂ ಅನಿಂದಿತ್ ಕೆ ಎಸ್.ಉಪಸ್ಥಿತರಿದ್ದರು.
ಗ್ರಾಮದ ಪ್ರಮುಖ ಸಂಪರ್ಕ ರಸ್ತೆಯ ಅಭಿವೃದ್ಧಿಗಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ಇದು ಎಲ್ಲರೂ ಒಗ್ಗಟ್ಟಾಗಿ ಕೈಗೊಂಡ ಪ್ರಯತ್ನವಾಗಿದೆ.