ಕಾಂತಮಂಗಲದಲ್ಲಿ ಮರಾಠ ಕ್ಷತ್ರಿಯ ಸೇವಾ ಸಂಘದಿಂದ ಸ್ನೇಹ ಸಮ್ಮಿಲನ

0

ಶಾಸಕಿ ಭಾಗೀರಥಿ ಮುರುಳ್ಯರಿಗೆ ಸನ್ಮಾನ

ಸುಳ್ಯದ ಮರಾಠ ಕ್ಷತ್ರಿಯ ಸೇವಾ ಸಂಘ ದ ವತಿಯಿಂದ ಸ್ನೇಹ ಸಮ್ಮಿಲನ -2026 ಕಾರ್ಯಕ್ರಮ ಅಜ್ಜಾವರ ಕಾಂತಮಂಗಲದಲ್ಲಿರುವ ಸಂಘದ ಸಭಾಂಗಣದಲ್ಲಿ ಅ.25ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ದೀಕ್ಷಾ ಮಾಧವ ರಾವ್ ಜಾಧವ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಸಕರಾದ ಕು. ಭಾಗೀರಥಿ ಮುರುಳ್ಯ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮಾಜಿ ಅಧ್ಯಕ್ಷರುಗಳಾದ ಸುಂದರ್ ರಾವ್ ಚಂದ್ರಮಾನ್, ನಾರಾಯಣ ರಾವ್
ವಾಗ್ಮಾನ್ , ಚಂದ್ರಶೇಖರ ರಾವ್ ಸೂರ್ಯವಂಶಿ ಉಪಸ್ಥಿತರಿದ್ದರು.
ಮರಾಠ ಕ್ಷತ್ರಿಯ ಸೇವಾ ಸಂಘದ ವತಿಯಿಂದ ಶಾಸಕರಾದ ಕು!.ಭಾಗೀರಥಿ ಮುರುಳ್ಯ ಇವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಬಹುಮಾನ್ ಹಳೆಗೇಟು ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಚಂದ್ರಶೇಖರ ರಾವ್ ಕೇರ್ಪಳ ವಂದಿಸಿದರು. ದಯಾನಂದ ರಾವ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.