ಹರಿಹರ ಪಲ್ಲತಡ್ಕ: ರಕ್ತದಾನ ಶಿಬಿರ, ಆಧಾರ್ ಕಾರ್ಡ್, ಅಪಘಾತ ವಿಮೆ, ಅಂಚೆ ಇಲಾಖೆ ಸೌಲಭ್ಯಗಳ ಶಿಬಿರ

0

ಸಚಿನ್ ಕ್ರೀಡಾ ಸಂಘ ಹರಿಹರ ಪಲ್ಲತ್ತಡ್ಕ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ಭಾರತೀಯ ರೆಡ್ ಕ್ರಾಸ್ ಸುಳ್ಯ ತಾಲೂಕು ಇವುಗಳ ಜಂಟಿ ಆಶ್ರಯದಲ್ಲಿ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಹಾಗೂ ಅಪಘಾತ ವಿಮೆ ನೋಂದಣಿ, ಅಂಚೆ ಇಲಾಖೆಯ ವಿವಿಧ ಸೇವಾ ಸೌಲಭ್ಯಗಳ ಶಿಬಿರ ಹಾಗೂ ರಕ್ತದಾನ ಶಿಬಿರವು ಅ. 24ರಂದು ಶ್ರೀ ಹರಿಹರೇಶ್ವರ ಕಲಾ ಮಂದಿರದಲ್ಲಿ ನಡೆಯಿತು.

ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿನ್ ಕ್ರೀಡಾ ಸಂಘದ ಅಧ್ಯಕ್ಷರಾದ ರವಿಚಂದ್ರ ಗೊಳ್ಯಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ನಿರ್ದೇಶಕರಾದ ದಿನೇಶ್ ಹಾಲೆಮಜಲು ಉಪಸ್ಥಿತರಿದ್ದರು. ರಕ್ತದಾನದ ಬಗ್ಗೆ,ಭಾರತೀಯ ರೆಡ್ ಕ್ರಾಸ್ ಸುಳ್ಯ ಇದರ ಸಭಾಪತಿಗಳಾದ ಸುಧಾಕರ ರೈ ಹಾಗೂ ಅಂಚೆ ಇಲಾಖೆಯ ಸೌಲಭ್ಯಗಳ ಬಗ್ಗೆ ಅಂಚೆ ಇಲಾಖೆ ಪುತ್ತೂರ ಇದರ ಅದೀಕ್ಷಕರಾದ ಗುರುಪ್ರಸಾದ್ ಮಾಹಿತಿ ನೀಡಿದರು.
ಪ್ರೀಯಾ ಕಲ್ಲೇಮಠ ಸ್ವಾಗತಿಸಿ, ದೀಕ್ಷಿತ್ ದೊಡ್ಡಕಜೆ ಧನ್ಯವಾದಗೈದರು.
ಅರುಣ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ವರದಿ: ಕುಶಾಲಪ್ಪ ಕಾಂತುಕುಮೇರಿ