ಸಹಕಾರ ಸಪ್ತಾಹ ಪ್ರಯುಕ್ತ ಸಹಕಾರಿ ಕ್ರೀಡಾಕೂಟ

0

ಮ್ಯಾರಥಾನ್ ಓಟದಲ್ಲಿ ಒಂದೇ ಕುಟುಂಬದ ಅವಳಿ ಮಕ್ಕಳು ಹಾಗೂ ತಂದೆಯ ಸಾಧನೆ

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಹಕಾರ ಸಪ್ತಾಹ ಪ್ರಯುಕ್ತ ಅ. 25 ರಂದು ನಡೆದ ಸಹಕಾರಿ ಕ್ರೀಡಾಕೂಟ ಮ್ಯಾರಥಾನ್ ಓಟದಲ್ಲಿ 18 ವರ್ಷ ಬಾಲಕಿಯರ ವಿಭಾಗದಲ್ಲಿ ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ 9 ನೇ ತರಗತಿಯ ಅವಳಿ ವಿದ್ಯಾರ್ಥಿಗಳಾದ ಕು. ಹೀಮನ್ಯ ಪ್ರಥಮ ಸ್ಥಾನ, ಕು. ಹೀಮಶ್ರೀ ದ್ವಿತೀಯ ಸ್ಥಾನ ಹಾಗೂ ಇವರ ತಂದೆ ತಾರಾನಾಥ ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.