ಸುಳ್ಯ ರಾಮ ಮಂದಿರದಲ್ಲಿ ವರ್ಷಂಪ್ರತಿ ಜರುಗುವ ಏಕಾಹ ಭಜನೆಯು ನ.20 ರಂದು ನಡೆಯಲಿದ್ದು, ಪೂರ್ವ ಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆಯು ಅ.25 ರಂದು ಮಂದಿರದ ವಠಾರದಲ್ಲಿ ನಡೆಯಿತು.














ಆಡಳಿತ ಧರ್ಮದರ್ಶಿ ಮಂಡಳಿಯ ಉಪಾಧ್ಯಕ್ಷ ರಾದ ಕೃಷ್ಣ ಕಾಮತ್ ಅರಂಬೂರು ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಏಕಾಹ ಭಜನೆಯ
ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದರು.
ಆಮಂತ್ರಣ ಪತ್ರ ಮನೆ ಮನೆಗೆ ತಲುಪಿಸುವ ಕುರಿತು ಸಮಿತಿಯ ಸದಸ್ಯರಿಗೆ ಜವಬ್ದಾರಿ ಹಂಚಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ನವರಾತ್ರಿಯ ಪ್ರಯುಕ್ತ ಹಮ್ಮಿಕೊಂಡ ದುರ್ಗಾ ಪೂಜೆಯ ಲೆಕ್ಕ ಪತ್ರವನ್ನು ಗೋಪಾಲ ಎಸ್ ನಡುಬೈಲು ಮಂಡಿಸಿದರು.

ಈ ಸಂದರ್ಭದಲ್ಲಿ ಧರ್ಮ ದರ್ಶಿ ಮಂಡಳಿಯ ಪದಾಧಿಕಾರಿಗಳಾದ ಮಹಾಬಲ ಕೇರ್ಪಳ, ಶ್ರೀನಿವಾಸ ರಾವ್, ಪ್ರದೀಪ್ ಪ್ರಭು ಸುಳ್ಯ,ಗೋಪಾಲ ಎಸ್ ನಡುಬೈಲು, ಭಾಸ್ಕರ ನಾಯರ್, ಬೆಳ್ಯಪ್ಪ ಗೌಡ ಬಳ್ಳಡ್ಕ, ಪಾಲಚಂದ್ರ ವೈ.ವಿ ಹಳೆಗೇಟು,ರಾಮ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕೇರ್ಪಳ, ಮನೋಜ್ ಸಾಲ್ತಾಡಿ ಕೇರ್ಪಳ, ಆನಂದ ಬೆಟ್ಟಂಪಾಡಿ, ಮೋನಪ್ಪ ಪೂಜಾರಿ, ಭಾಸ್ಕರ ನಾಯ್ಕ್ ಕುರುಂಜಿ ಗುಡ್ಡೆ, ಶ್ರವಣ್ ಕೇರ್ಪಳ, ಶಿವಪ್ರಸಾದ್ ಆಲೆಟ್ಟಿ, ಮಹಿಳಾ ಸಮಿತಿ ಅಧ್ಯಕ್ಷೆ
ಶ್ರೀಮತಿ ನಮಿತಾ ಪ್ರವೀಣ್ ರಾವ್,ಶ್ರೀಮತಿ ಹೇಮಲತಾ ಗೋಪಾಲ್, ಶ್ರೀಮತಿ ಸುನಂದಾ ಶೆಟ್ಟಿ, ಶ್ರೀಮತಿ ದಾಕ್ಷಾಯಿಣಿ, ಶ್ರೀಮತಿ ಸುನಂದಾ ರೈ ಮತ್ತಿತರರು ಉಪಸ್ಥಿತರಿದ್ದರು.







