













ದಿನಾಂಕ:27.10.2026 ನೇ ಮಂಗಳವಾರದಂದು ಗುತ್ತಿಗಾರು 33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ, ಪೂರ್ವಾಹ್ನ 09:00 ಗಂಟೆಯಿಂದ ಅಪರಾಹ್ನ 4:00 ಗಂಟೆಯವರೆಗೆ ಗುತ್ತಿಗಾರು ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ನಿಲುಗಡೆಯಾಗುವುದು.
ಆದ್ದರಿಂದ ಗುತ್ತಿಗಾರು ಉಪಕೇಂದ್ರದಿಂದ ಹೊರಡುವ ಗುತ್ತಿಗಾರು, ಕೂತ್ಕುಂಜ, ಮಡಪ್ಪಾಡಿ, ಎಲಿಮಲೆ, ಮರ್ಕಂಜ ಮತ್ತು ಬಳ್ಳ 11ಕೆವಿ ಫೀಢರ್ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.






