ದೇವರಕೊಲ್ಲಿ : ಕಾರುಗಳ ಅಪಘಾತ- ಐವರು ಪ್ರಯಾಣಿಕರಿಗೆ ಗಾಯ

0

ಸುಳ್ಯ ಆಸ್ಪತ್ರೆಗೆ ದಾಖಲು

ದೇವರಕೊಲ್ಲಿಯ ಚಾಮುಂಡೆಶ್ವರಿ ದೈವಸ್ಥಾನದ ಬಳಿ ಎರಡು ಕಾರುಗಳ ಮದ್ಯೆ ಅಪಘಾತ ಸಂಭವಿಸಿ ಎರಡು ಕಾರಿನಲ್ಲಿದ್ದ ಐವರು ಪ್ರಯಾಣಿಕರು ಗಾಯ ಗೊಂಡಿರುವ ಘಟನೆ ಅ 26 ರಂದು ನಡೆದಿದೆ.

ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕಾರುಗಳು ಮುಖಾಮುಖಿ ಡಿಕ್ಕಿಯಾದ ಕಾರಣ ಎರಡು ವಾಹನಗಳ ಮುಂಭಾಗ ಜಖಂ ಗೊಂಡಿದೆ.
ಗಾಯಳುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.