ನೆಡುಂಬಾಶೇರಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಯಾಸ್ ಕನಕಮಜಲುರವರ ಮನೆಗೆ SDPI ನಾಯಕರ ಭೇಟಿ

0

ಕೇರಳದ ಎರ್ನಾಕುಲಂ ಜಿಲ್ಲೆಯ ನೆಡುಂಬಾಶೇರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕನಕಮಜಲು ಸುಣ್ಣಮೂಲೆ ನಿವಾಸಿ ಇಯಾಸ್ ಅವರ ಮನೆಗೆ ಇಂದು SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಅವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ SDPI ಮಂಗಳೂರು ಜಿಲ್ಲಾ ಅಧ್ಯಕ್ಷರಾದ ಅನ್ವರ್ ಸಾದತ್, ಮಂಗಳೂರು ಜಿಲ್ಲಾ ಸಮಿತಿ ಉಪಾದ್ಯೆಕ್ಷರಾದ ಕಲಾಂ ಸುಳ್ಯ,ಜಿಲ್ಲಾ ಸಮೀತಿ ಸದಸ್ಯರಾದ ಸಿದ್ದೀಕ್ ಅರಕ್ಕಾಡಿ ಹಾಗೂ ಸುಳ್ಯ ತಾಲೂಕು ಅಧ್ಯಕ್ಷರಾದ ಮಿರಾಜ್ ಸುಳ್ಯ ,ಸದಸ್ಯರಾದ ಅಬ್ದುಲ್ಲ ಅಡ್ಕಾರ್ ,ಕಲಂದರ್ ಅರಂಬೂರು ಷರೀಫ್ ನಿಂತಿಕ್ಕಲ್,ಕಭೀರ್ ಅರಂಬೂರು ಅವರು ಉಪಸ್ಥಿತರಿದ್ದು, ಮೃತ ಇಯಾಸ್ ಅವರ ಕುಟುಂಬದವರನ್ನು ಭೇಟಿಯಾದರು.