ನಾಗಪಟ್ಟಣ ಸೇತುವೆ ಬಂದ್ – ವಾಹನ ಸಂಚಾರ ನಿಷೇಧ- ಪರ್ಯಾಯ ಅಜ್ಜಾವರ ನಾರ್ಕೋಡು ರಸ್ತೆ ಬಳಕೆಗೆ ಸೂಚನೆ

0

ಆಲೆಟ್ಟಿ ಮುಖ್ಯ ರಸ್ತೆಯ ನಾಗಪಟ್ಟಣ ಸೇತುವೆಯ ದುರಸ್ತಿ ಕಾರ್ಯ ಅ.26 ರಿಂದ ಪ್ರಾರಂಭಗೊಂಡಿದ್ದು ವಾಹನ ಸಂಚಾರ ನಿಷೇಧಿಸಲಾಗಿದೆ. ಆಲೆಟ್ಟಿ ಬಡ್ಡಡ್ಕ ಮತ್ತು ಕೋಲ್ಚಾರು ಬಂದಡ್ಕ ಕಡೆಗೆ ಸಂಚರಿಸಲು ಪರ್ಯಾಯ. ಕಾಂತಮಂಗಲ ಅಜ್ಜಾವರ ರಸ್ತೆಯ ಮೂಲಕ ಸಂಚರಿಸುವಂತೆ ಮಾರ್ಗಸೂಚಿ ಬ್ಯಾನರ್ ನ್ನು ಲೋಕೋಪಯೋಗಿ ಇಲಾಖೆಯ ವತಿಯಿಂದ ಅಳವಡಿಸಲಾಗಿದೆ. ಸೇತುವೆಯ ಎರಡು ಬದಿಯಲ್ಲಿ ವಾಹನ
ಸಂಚರಿಸದಂತೆ ಮಣ್ಣು ಹಾಕಿ ಬಂದ್ ಮಾಡಲಾಗಿದೆ.