













ಸುಳ್ಯ ತಾಲೂಕಿನ ಕನಕಮಜಲು- ಗ್ರಾಮದಲ್ಲಿ ಸುಮಾರು 1.5 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಗಳಿಗೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರು ಗುದ್ದಲಿಪೂಜೆ ಮತ್ತು ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಯನ್ನು ಅ.26 ರಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್, ಕೋಶಾಧಿಕಾರಿ ಸುಬೋದ್ ಶೆಟ್ಟಿ, ಮಹಾಶಕ್ತಿಕೇಂದ್ರ ಅಧ್ಯಕ್ಷ ಹೇಮಂತ್ ಮಠ,ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು, ಶಕ್ತಿ ಕೇಂದ್ರ ಪ್ರಮುಖ್ ಚಂದ್ರಶೇಖರ ,ಜಾಲ್ಸೂರು ಶಕ್ತಿಕೇಂದ್ರ ಪ್ರಮುಖ್ ಡಾ.ಗೋಪಾಲಕೃಷ್ಣ , ಪಿ.ಎಲ್ ಡಿ ಬ್ಯಾಂಕ್ ಅಧ್ಯಕ್ಷ ಜಯರಾಮ ರೈ , ತಾಲ್ಲೂಕು ಪಂಚಾಯತ ಮಾಜಿ ಅಧ್ಯಕ್ಷೆ ಗುಣವತಿಕೊಲ್ಲಂತಡ್ಕ,ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಶಾರದ,ಬೂತ್ ಸಮಿತಿ ಅಧ್ಯಕ್ಷರು ಸಹಿತ ಕಾರ್ಯಕರ್ತರು, ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.







