ಅ.27ರಂದು ದೇವಿದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು,ಸಾಯಿಕೃಷ್ಣ ಸಹಿತ ಹಾಸ್ಯ ಕಲಾವಿದರು ಸುಳ್ಯದ ಸಿಂಧೂರ ಶೋ ರೂಂಗೆ ಭೇಟಿ

0

ಗ್ರಾಹಕರಿಗೆ ವಿಶೇಷ ಆಫರ್‌ಗಳ ಆರಂಭ : ಎರಡು ಜತೆ ವಸ್ತ್ರ ಖರೀದಿಸಿದರೆ ಒಂದು ಜತೆ ಉಚಿತ – ಎಲ್ಲದಕ್ಕೂ ಅನ್ವಯ

ಅ.27ರಂದು ಮೊದಲು ಬಂದ 3೦೦ ಗ್ರಾಹಕರಿಗೆ ಉಚಿತ ವಸ್ತ್ರ

ಸುಳ್ಯದ ಹೆಸರಾಂತ ವಸ್ತ್ರ ಮಳಿಗೆಯಾಗಿರುವ, ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಸ್ಕಂದ ಕಾಂಪ್ಲೆಕ್ಸ್‌ನಲ್ಲಿರುವ ಸಿಂಧೂರ ಶೋ ರೂಂ ನಲ್ಲಿ ಹಬ್ಬಗಳ ಸಂಭ್ರಮಕ್ಕಾಗಿ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ತರಲಾಗುತ್ತಿದೆ. ಅ.೨೭ರಂದು ಈ ಆಫರ್‌ಗಳಿಗೆ ಚಾಲನೆ ನೀಡಲಾಗುತ್ತಿದ್ದು ಹೆಸರಾಂತ ಕಲಾವಿದರಾದ ದೇವಿದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ, ಸು ಫ್ರಂ ಸೋ ಖ್ಯಾತಿಯ ಹಾಸ್ಯನಟ ಶಿವು ಅಳಿಕೆ ಸಹಿತ ಹಾಸ್ಯ ಕಲಾವಿದರು ಆಗಮಿಸಲಿದ್ದಾರೆ.
ದೀಪಾವಳಿ ಮತ್ತಿತರ
ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚುಗೊಳಿಸಲು ಗ್ರಾಹಕರಿಗೆ ಈ ಆಫರ್ ತರಲಾಗುತ್ತಿದೆ. ಅ.೨೭ರಿಂದ ಸಿಂಧೂರ ಶೋ ರೂಂ ಮಳಿಗೆಯಿಂದ ಯಾವುದೇ ವಸ್ತ್ರವನ್ನು ಎರಡು ಜತೆ ಖರೀದಿಸಿದರೆ ಒಂದು ಜತೆ ವಸ್ತ್ರ ಉಚಿತವಾಗಿ ನೀಡಲಾಗುತ್ತದೆ. ಇದು ಎಲ್ಲ ವಸ್ತ್ರಗಳಿಗೂ ಅನ್ವಯವಾಗುತ್ತಿದ್ದು ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ರೂ.೪೯೯ರ ಮೇಲ್ಪಟ್ಟ ಖರೀದಿಗೆ ಸ್ಕ್ರಾಚ್ ಕಾರ್ಡ್ ಮತ್ತು ಲಕ್ಕಿ ಕೂಪನ್ ನಲ್ಲಿ ರೂ. ೧ ಸಾವಿರದ ವರೆಗೆ ಗೆಲ್ಲಬಹುದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಿಂಧೂರ ಸಂಸ್ಥೆಯ ಮಾಲಕರಾದ ಧನ್‌ರಾಮ್ ಪಟೇಲ್‌ರವರು “ಭಾರತದಲ್ಲೇ ಅತೀ ಕಡಿಮೆ ಬೆಲೆಗೆ ಬಟ್ಟೆ ಸಿಗುವ ಏಕೈಕ ಮಳಿಗೆಯನ್ನು ನೋಡುವುದಕ್ಕಾಗಿ ತುಳುನಾಡಿನ ನಟರಾದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್, ನವರಸ ರಾಜ ಭೋಜರಾಜ ವಾಮಂಜೂರು, ಹಾಸ್ಯ ನಟ ಸಾಯಿ ಕೃಷ್ಣ ಹಾಗೂ ಸುಫ್ರಂ ಸೋ ಖ್ಯಾತಿಯ ಹಾಸ್ಯ ನಟ ಶಿವು ಅಳಿಕೆ ನಮ್ಮ ಸುಳ್ಯಕ್ಕೆ ಬರ್ತಿದ್ದಾರೆ. ಅ.೨೭ ಮಂಗಳವಾರ ಬೆಳಗ್ಗೆ ೧೦.೩೦ಕ್ಕೆ ಒಂದೇ ವೇದಿಕೆಯಲ್ಲಿ ನಾಲ್ವರು ತಾರಾ ನಟರು ಸುಳ್ಯದ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದ ಸಿಂಧೂರ ಬಟ್ಟೆ ಮಳಿಗೆಯಲ್ಲಿ ನಿಮಗೆ ಸಿಗ್ತಾರೆ. ಈ ಸಂದರ್ಭದಲ್ಲಿ ನಮ್ಮೊಂದಿಗೆ ಸಂಭ್ರಮಿಸಲು ಮೊದಲು ಆಗಮಿಸುವ ೩೦೦ ಗ್ರಾಹಕರಿಗೆ ೧ ರೂ.ಗೆ ಸೀರೆ, ೧ ರೂ.ಗೆ ಶರ್ಟ್, ೧ ರೂ.ಗೆ ಟಾಪ್ ನೀಡಲಾಗ್ತಿದೆ. ಈ ವೇಳೆ ಸಿಂಧೂರದಲ್ಲಿ ರಾಮ್ ರಾಜ್, ಸಿಯಾರಾಮ್ ಸೇರಿದಂತೆ ಯಾವುದೇ ಬ್ರಾಂಡೆಡ್ ಬಟ್ಟೆಗಳಲ್ಲಿ ೨ ಕೊಂಡರೆ ೧ ಉಚಿತ ನೀಡಲಾಗ್ತಿದೆ. ಇಷ್ಟು ಕಡಿಮೆ ಬೆಲೆಗೆ ಇಡೀ ಭಾರತದಲ್ಲೇ ಪ್ರಥಮ ಬಾರಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.