ಎಕ್ಸೆಲ್ ಚೆಸ್ ಟ್ರೋಫಿ: ಮಾರುತಿ ಸ್ಕೂಲ್ ಸನುದೀಪ್ತಿಗೆ ದ್ವಿತೀಯ ಸ್ಥಾನ*

0

ಬೆಳ್ತಂಗಡಿಯ ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ ಅ. 25ರಂದು ನಡೆದ ಅಂತರ ಶಾಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮಾರುತಿ ಇಂಟರ್ನ್ಯಾಷನಲ್ ಸ್ಕೂಲ್ ಗೂನಡ್ಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಸನುದೀಪ್ತಿ ಇವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಸನುದೀಪ್ತಿ ಉತ್ತಮ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಈಕೆ ಮಹಾಬಲ ಕೆದಂಬಾಡಿ ಮತ್ತು ಶ್ರೀಮತಿ ಭವ್ಯ ಇವರ ಪುತ್ರಿ.

ಈಕೆ ಹರಿಪ್ರಸಾದ್ ಕೊಯಿಂಗಾಜೆ ಇವರಲ್ಲಿ ತರಬೇತಿ ಪಡೆಯುತಿದ್ದಾಳೆ